ಶಹಾಬಾದ:ಕೊರೊನಾದಿಂದ ತತ್ತರಿಸಿರುವ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಹೊರೆಯಾಗುತ್ತಿದ್ದರೂ, ಕೇಂದ್ರ ಸರ್ಕಾರ ಅದನ್ನು ಕಡಿಮೆಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಹೇಳಿದರು.
ಅವರು ಭಂಕೂರ ಗ್ರಾಮದ ಪೆಟ್ರೋಲ್ ಬಂಕ್ ಮುಂದೆ ಪೆಟ್ರೋಲ್ ಮತ್ತು ಡೀಸೆಲ್ ದರದ ನಿರಂತರ ಏರಿಕೆಯನ್ನು ಖಂಡಿಸಿ ರವಿವಾರ ಕಾಂಗ್ರೆಸ್ ಪಕ್ಷವು ೧೦೦ ನಾಟ್‌ಔಟ್ ಹೆಸರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಯುಪಿಎ ಅಧಿಕಾರಿದ ಸಮಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಕೆ ಖಂಡಿಸಿ ಬಿಜೆಪಿ ದೇಶದಾಧ್ಯಂತ ಪ್ರತಿಭಟನೆ ಮಾಡಿ, ಬೊಬ್ಬೆ ಹೊಡೆಯುತ್ತಿದ್ದರು.ಈಗ ತಮ್ಮದೇ ಅಧಿಕಾರ ಕೇಂದ್ರದಲ್ಲಿದೆ. ಆದರೆ ಇಂದು ಕಂಡು ಕಾಣದಂತೆ ವರ್ತನೆ ಮಾಡುತ್ತಿರುವುದು ನೋಡಿದರೇ ಇದಕ್ಕಿಂತ ನಿರ್ಲಜ್ಯ ಸರ್ಕಾರ ಹಿಂದೆಂದೂ ನೋಡಿಲ್ಲ ಎಂದು ಹರಿಹಾಯ್ದರು.
ಮುಖಂಡರಾದ ಸುರೇಶ ಮೆಂಗನ, ಪೀರಪಾಷಾ, ಮಲ್ಲಿಕಾರ್ಜುನ ಪೂಜಾರಿ ಹಾಗೂ ಮಹೇಶ ಧರಿ ಮಾತನಾಡಿ, ದೇಶದಲ್ಲಿ ಜನಪರವಾರದ ಆಡಳಿ ನೀಡುತ್ತೆವೆ. ಇಪ್ಪತ್ತು ರೂ.ಗೆ ಪೆಟ್ರೋಲ್ ಮತ್ತು ಡಿಸೇಲ್ ಮಾಡುತ್ತೆವೆೆ ಎಂದು ಹೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಬೆಲೆ ಏರಿಕೆ ಮಾಡಿದೆ.ಇದರಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತಿದ್ದರೂ, ಕೇಂದ್ರ ಸರ್ಕಾರ ಯಾವುದಕ್ಕೂ ಲೆಕ್ಕ ಹಾಕದೇ ಮತ್ತೆ ಜನಸಾಮನ್ಯರ ಬದುಕಿಗೆ ಕೊಡಲಿ ಪೆಟ್ಟು ಹಾಕುತ್ತಿರುವುದು ದುರಂತ. ಪೆಟ್ರೋಲ್ ಮತ್ತಿಡಿಸೇಲ್ ಮೇಲೆ ಸುಮಾರು ೩೨ ರೂ. ತೆರಿಗೆ ಹಾಕುತ್ತಿದೆ. ಈ ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕೇವಲ ೩.೪೫ ರೂ. ತೆರಿಗೆ ಹಾಕಲಾಗುತ್ತಿತ್ತು. ಸುಮಾರು ೨೮.೩೭ ರೂ. ತೆರಿಗೆ ಹೆಚ್ಚಳ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಅಚ್ಚೆ ದಿನ ಬರುವಂತೆ ಮಾಡಿದ್ದಾರೆ ಎಂದು ವ್ಯಂಗವಾಡಿದರು.
ಮುಖಂಡರಾದ ಮೃತ್ಯುಂಜಯ್ ಹಿರೇಮಠ, ಅಜಿತ್‌ಕುಮಾರ ಪಾಟೀಲ,ಶರಣಬಸಪ್ಪ ಧನ್ನಾ, ಭೀಮುಗೌಡ ಖೇಣಿ, ದೇವೆಂದ್ರ ಕಾರೊಳ್ಳಿ, ಮುಜಾಹಿದ್ ಹುಸೇನ್, ರೇಣುಕಾ ಚವ್ಹಾಣ,ಭರತ್ ಧನ್ನಾ, ಮುನ್ನಾ ಪಟೇಲ್, ಸಿದ್ದಿಕ್, ತೇಜಸ್ ಧನ್ನಾ, ರಮೇಶ ಮೆಂಗನ್,ಭೀಮರಾಯ ಶಿರಗೊಂಡ,ಮಲ್ಲಿಕಾರ್ಜುನ ಧರಿ, ಶರಬಣ್ಣ ಮುತ್ತಗಾ ಸೇರಿದಂತೆ ಅನೇಕ ಜನರು ಇದ್ದರು.