ಕಲಬುರಗಿ: ಮಹಾನಗರ ಪಾಲಿಕೆಯ ವಾರ್ಡ್ ನಂ ೨೩ ರಲ್ಲಿ ಬರುವ ನೆಹರೂ ನಗರದಲ್ಲಿ ಕೋವಿಡ್‌ನಿಂದಾಗಿ ಲಾಕ್‌ಡೌನ್ ಆಗಿದ್ದಕ್ಕಾಗಿ ಸಂಕಷ್ಠದಲ್ಲಿದ್ದ ಕೂಲಿ ಬಡ ಕಾರ್ಮಿಕರಿಗೆ ಕೋವಿಡ್ ಜಾಗೃತಿ ಕಾರ್ಯಕ್ರಮ ಹಾಗೂ ಬಡ ಕೂಲಿ ಕಾರ್ಮಿಕರಿಗೆ ನಿಜಸುಖಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಸ್ಕ ಮತ್ತು ದಿನಸಿ ಆಹಾರದ ಕಿಟ್ಟ್‌ಗಳನ್ನು ಕ್ರೆಡಲ್ ಅಧ್ಯಕ್ಷ ಹಾಗೂ ಬಿಜೆಪಿ ಯುವ ನಾಯಕ ಚಂದು ಪಾಟೀಲ್ ವಿತರಿಸಿ ಮಾತನಾಡುತ್ತಾ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಸ್ಯಾನಿಟೈಜರ್, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಸರಕಾರದ ನಿಯಮ ಪಾಲಿಸಬೇಕು ಕರೋನಾದಿಂದ ಭಯ ಬೇಡ ಜಾಗೃತಿಯಿಂದ ಇರಬೇಕು ಎಂದು ಹೇಳಿದರು.
ಟ್ರಸ್ಟ್‌ನ ಅಧ್ಯಕ್ಷ ಈರಣ್ಣ ಸಿ. ಹಡಪದ ಮಾತನಾಡಿ ಕಡ್ಡಾಯವಾಗಿ ಎಲ್ಲರೂ ವ್ಯಾಕ್ಸಿನ್ ತೆಗೆದುಕೊಳ್ಳಬೇಕು ಕರೋನಾದಿಂದ ಭಯ ಬೇಡ ಜಾಗೃತರಾಗಿರಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಅಶೋಕ ಮಾನಕರ್, ಉಮೇಶ ಪಾಟೀಲ್, ಬಿ. ಜಯಸಿಂಗ್ ಠಾಕೂರ, ರಮೇಶ ತಾಂಡೂರಕರ್, ಶರಣು ಶೆಟ್ಟಿ, ಸುಭಾಷ ಬದಾಮಿ, ಅಂಬರೀಶ ಮಂಗಲಗಿ, ಶಂಕರ ಹಡಪದ, ಮದನ ಗದವಾಲ್,ಪ್ರಭಾಕರ್ ಸೇರಿದಂತೆ ಇನ್ನಿತರರು ಇದ್ದರು.