ಕಲಬುರಗಿ: ಮನೋಮಯ ಪ್ರೋಡಕ್ಷನ್ಸ ಕಲಬುರಗಿ ಹಾಗೂ ಪಿ.ಡಿ.ಎ ತಾಂತ್ರಿಕ ವಿದ್ಯಾಲಯ ಸಹಯೋಗದಲ್ಲಿ ಜುಲೈ 20 ಮತ್ತು 21 ರಂದು ಎರಡು ದಿನಗಳ ಕಲಬುರಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವನ್ನು ಆಯೋಜಿಲಾಗಿದೆ.
ಪಿ.ಡಿ.ಎ ತಾಂತ್ರಿಕ ವಿದ್ಯಾಲಯದ ಸ್ಟುಡೆಂಟ ಆಕ್ಟಿವಿಟಿ ಸೆಂಟರನ ಅಡಿಟೋರಿಯಮ್ನಲ್ಲಿ ಆಯೋಜಿಸುವ ಈ ಚಲನ ಚಿತ್ರೋತ್ಸವವು ಈ ಬಾರಿ ಎರಡನೇ ವರ್ಷದ ಸೋಬ್ರಮಿಸುತಿದೆ.
ಕಳೆದ ವರ್ಷ 2018 ಸೆಪ್ಟೆಂಬರ 25 ರಂದು ಒಂದು ದಿನದ ಕಿರುಚಿತ್ರಗಳ ಚಿತ್ರೋತ್ಸವವನ್ನು ಡಾ. ಎಸ್.ಎಂ ಪಂಡಿಯ ರಂಗಮಂದಿರದಲ್ಲಿ ನಡೆಸಲಾಗಿತ್ತು. ಆದರೆ ಅಭೂತಪುರ್ವ ಯಶಸ್ಸು ಮತ್ತು ಕಲಬುರಗಿಯ ಸಾರ್ವಜನಿಕ ಹಾಗೂ ಮಾಧ್ಯಮದ ಸಹಕಾರದಿಂದ ಜರುಹಿದ್ದನು ನಾವು ಸ್ಮರಿಸುತ್ತೆವೆ, ಆ ಯಶಸ್ಸಿನಿಂದಾಗಿ ಈ ಬಾರಿ ಎರಡು ದಿನಗಳ ವಲನ ಚಿತ್ರೋತ್ಸವ ನಡೆಸಲಾಗುತ್ತಿದೆ.
ಈ ಬಾರಿಯ ಚಲನಚಿತ್ರೋತ್ಸವ ಸಂಬಂದಿಸಿದಂತೆ, ಜ್ಯೂರಿ ಸದಸ್ಯರನ್ನು ನೇಮಕಮಾಡಲಾಗಿದೆ. ಹಿರಿಯ ಚಲನಚಿತ್ರ ನಿರ್ದೆಶಕರು ಬಿ. ರಾಮಮೂರ್ತಿ, ಹಿರಿಯ ನಟಿ ಚಿತ್ಕಳಾ ಬಿರಾದಾರ, ರಂಗಭೂಮಿ ಹಿರಿಯ ನಟ, ನಿರ್ದೆಶಕ ಯಶವಂತ ಸರ್‌ದೆಶಪಾಂಡೆ ಹಾಗೂ ಹೈದ್ರಾಬಾದನ ರಾಮನಾಯ್ಟು ಫಿಲ್ಮಸ್ಕೂಲನ ಪ್ರೊಫೆಸರ್ ರಾಜಕುಮಾರ ರಾವನ್ ಅವರು ನೇಮಕಗೂಂಡಿದ್ದು, ಚಲನ ಚಿತ್ರದಲ್ಲಿ ಸ್ಪರ್ಧಾ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.
ಕಲಬುರಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ಚಲನ ಚಿತ್ರಕಲಿಕೆಯಲ್ಲಿ ಆಸಕ್ತರಿಗೆ, ವಿದ್ಯಾರ್ತಿಗಳಿಗೆ ಸಿಮಿಮಾ ತಂತ್ರಜ್ಞಾನಗಳ ಕುರಿತು ಶಿಬಿರ, ಕಿರುಚಿತ್ರಗಳ ಪ್ರದರ್ಶನ, ಸಂವಾದ ಹಾಗೂ ನಿರ್ಮಾಪಕರು/ನಿರ್ದೆಶಕರು ಜೋತೆ ಚತನ, ಮಾತುಕತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ನಿರ್ವಹಣಾ ಮಂಡಳಿ: ಕಲಬುರಗಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ನಿರ್ವಹಣಾ ಮಂಡಳಿಯನ್ನು ರಚಿಸಲಾಗಿದೆ, ಹಿರಿಯ ರಂಗ ಕರ್ಮಿ ಪತ್ರಕರ್ತರಾದ ಪ್ರಭಾಕರ ಜೋಶಿ, ಹಾಗು ಪಿಡಿಎ ತಂತ್ರಿಕ ವಿದ್ಯಲಯ ಪ್ರಾಂಶುಪಾಲರಾದ ಡಾ. ಎಸ್ ಎಸ್ ಹೆಬ್ಬಾಳ ನೆಮಕಗೊಂಡಿದ್ದಾರೆ. ಹರಿಯ ಪತ್ರಕರ‍್ತಾದ, ನಟ, ರಂಗ ಸಂಘಟಕ ಮಹಿಪಾಲ ರೆಡ್ಡಿ ಮುನ್ನುರ ಹಾಗೂ ಮನೋಮಯ ಪ್ರೋಡಕ್ಷನ್ಸ ಎಲ್ ಎಲ್ ಪಿ ಸಂಸ್ತಾಪಕರಾದ ವೈಭವ್ ಕೆಸ್ಕರ್ ಅವರು ಸಂಚಾಲಕರನ್ನಾಗಿ ಕಾರ್ಯ ನಿರ್ವಾಹಿಸಲಿದ್ದಾರೆ.