ಹುತಾತ್ಮ ಯೋಧ ಶರಣಬಸವ ಕೆಂಗುರಿ ಯುವಕರಿಗೆ ಮಾದರಿ: ಸುಬ್ಬಣ್ಣ ಜಮಖಂಡಿ

0
41

ಸುರಪುರ: ಚಿಕ್ಕ ವಯಸ್ಸಿನಲ್ಲಿಯೆ ಸೇನೆಗೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗಿ ಹುತಾತ್ಮನಾಗಿರುವ ವೀರಯೋಧ ಶರಣಬಸವ ಕೆಂಗುರಿ ಎಲ್ಲಾ ಯುವಕರಿಗು ಮಾದರಿಯಾಗಿದ್ದಾನೆ ಎಂದು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು.

ನಗರದ ತಹಸೀಲ್ ರಸ್ತೆಯಲ್ಲಿನ ಹುತಾತ್ಮ ಯೋಧ ಶರಣಬಸವ ಕೆಂಗುರಿ ವೃತ್ತದಲ್ಲಿ ಹಮ್ಮಿಕೊಂಡಿದ್ದ ಶರಣಬಸವ ಅವರ ೯ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ,ಇಂದಿನ ಎಲ್ಲಾ ಹೆತ್ತವರು ತಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸುವತ್ತ ಮುಂದಾಗಬೇಕು,ದೇಶಪ್ರೇಮ ಎನ್ನುವುದು ಕೇವಲ ಬಾಯಿ ಮಾತಾಗದೆ ಯುವಕರು ಸೇನೆಗೆ ಸೇರುವತ್ತ ಗಮನಹರಿಸಬೇಕೆಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ನಂತರ ಗೃಹರಕ್ಷಕ ದಳದ ಕಂಪನಿ ಕಮಾಂಡರ ಯಲ್ಲಪ್ಪ ಹುಲಿಕಲ್ ಮಾತನಾಡಿ,ಶರಣಬಸವ ನಮ್ಮ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸಿ ನಂತರ ಸೇನೆಗೆ ಸೇರುವ ಮೂಲಕ ನಮ್ಮ ಗೃಹರಕ್ಷಕ ದಳಕ್ಕೆ ಗೌರವ ತಂದಿದ್ದರು,ಅಂತಹ ಒಬ್ಬ ಹುತಾತ್ಮ ಯೋಧ ನಮ್ಮೊಂದಿಗೆ ಸೇವೆಯಲ್ಲಿ ಭಾಗವಹಿಸಿದ್ದು ನಮಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ನೆನಪಿಸಿಕೊಂಡರು.

ಕಾರ್ಯಕ್ರಮದ ಆರಂಭದಲ್ಲಿ ವೀರಯೋಧನ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.ಈ ಸಂದರ್ಭದಲ್ಲಿ ಯೋಧ ಶರಣಬಸವನ ತಂದೆ ಹಯ್ಯಾಳಪ್ಪ ಕೆಂಗುರಿ ಅಧಿಕಾರಿಗಳಾದ ವೆಂಕಟೇಶ್ವರ ಸುರಪುರ ರಮೇಶ ಅಂಬುರೆ ಭೀಮರಾಯ ಹುಲಿಕಲ್ ಮಲ್ಲಿಕಾರ್ಜುನ ಗುಡಗುಂಟಿ ಮಾನಯ್ಯ ನಾಯಕ ಬುಡ್ಡಪ್ಪ ಚವಲ್ಕರ್ ಶರಣು ಯಾದಗಿರ ವೀರಪ್ಪ ಸೂಗುರು ಚಂದ್ರು ದೊಡ್ಮನಿ ದೀವಳಗುಡ್ಡ ಸೇರಿದಂತೆ ಗೃಹರಕ್ಷಕ ದಳದ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here