ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಮಂಜೂರಾಗಿ ಖಾಲಿಯಿರುವ ಕೆಳಕಂಡ ಹುದ್ದೆಗಳನ್ನು ಹೊರಗುತ್ತಿಗೆ ಹಾಗೂ ಗೌರವಧನ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಂಡಳಿ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಡಳಿ ಕಚೇರಿಯಲ್ಲಿ ಓರ್ವ ಕಾರ್ಯನಿರ್ವಾಹಕ ಅಭಿಯಂತರರು, 5 ಜನ ಸಹಾಯಕ ಅಭಿಯಂತರರು, 2 ಜನ ಜೂನಿಯರ್ ಪೆÇ್ರೀಗ್ರಾಮರ್ ಹಾಗೂ 2 ಜನ ಕಂಪ್ಯೂಟರ್ ಆಪರೇಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಹುದ್ದೆಗಳ ಭರ್ತಿಯ ಅರ್ಹತಾ ವಿವರ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಯನ್ನು ಮಂಡಳಿಯ www.hkrdb.kar.nic.in ವೆಬ್ಸೈಟ್ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.