ಕಲಬುರಗಿ: ಕೋವಿಡ್ ಹಿನ್ನೆಲೆಯಲ್ಲಿ ದಕ್ಕನ್ ಭಾಗದ ಪ್ರಸಿದ್ಧ ಸೂಫಿ ಸಂತರಾದ ಹಜರತ್ ಖ್ವಾಜಾ ಬಂದಾ ನವಾಜ್(ರ.ಅ) 617 ನೇ ಉರುಸ್ ಮನೆಯಲ್ಲಿ ಆಚರಿಸಬೇಕೆಂದು ದರ್ಗಾದ ಪೀಠಾಧಿಪತಿ ಡಾ. ಸೈಯದ್ ಶಾ ಗೇಸುದರಾಜ್ ಖುಸ್ರೊ ಹುಸೈನಿ ಮನವಿ ಮಾಡಿದ್ದಾರೆ.
ಜೂನ್. 27, 28 ಮತ್ತು 29 ರಂದು ನಡೆಯಲಿರುವ ಉರುಸ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸೂಪಿ ಪರಂಪರೆ ಮತ್ತು ಭಾವೈಕ್ಯತೆಯ ಸಂಕೇತವಾಗಿರುವ ಖ್ವಾಜಾ ಬಂದಾ ನವಾಜ್ (ರ.ಅ) ಜಾತ್ರೆ ಕೋವಿಡ್ ಹಿನ್ನೆಲೆಯಲ್ಲಿ ಎರಡನೇ ಬಾರಿ ಉರುಸ್ ನಿಷೇಧಿಸಲಾಗಿತ್ತು.
ಈ ಬಾರಿ ಪೀಠಾಧಿಪತಿಗಳು ಉರುಸ್ ನಿಮಿತ್ತ ವಿಧಿವಿಧಾನಗಳನ್ನು ಆಚರಿಸಲಿದ್ದು, ಪೀಠಾಧಿಪತಿಗಳ ಕುಟುಂಬಸ್ಥರು ಹೊರತು ಪಡಿಸಿ ಉಳಿದವರಿಗೆ ನಷೇಧಿಸಲಾಗಿದೆ. ಉಳಿದವರ ಪ್ರವೇಶಕ್ಕಾಗಿ ದರ್ಗಾ ಬಂದ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಭಕ್ತ ಸಮುದಾಯದೆಲ್ಲರು ಮನೆಯಲ್ಲೇ ಸರಳವಾಗಿ 617ನೇ ಉರುಸ್ ಆಚರಿಸಲು ಕೋರಿದ್ದಾರೆ.