ಚಿತ್ತಾಪುರ: ತಾಲ್ಲೂಕಿನ ಕೊಂಚೂರಿನ ಪುಣ್ಯಕೋಟಿ ಗೋಶಾಲೆಯಲ್ಲಿ ಕಾರ ಹುಣ್ಣಿಮೆ ನಿಮಿತ್ಯ ವನ್ಯಜೀವಿಗಳ ಹಾಗೂ ಜನ ಕಲ್ಯಾಣಕ್ಕಾಗಿ ಅಗ್ನಿಹೋತ್ರ ಹಾಗೂ ಗೋವುಗಳಿಗೆ ವಿಶೇಷ ಪೂಜೆಯ ಕಾರ್ಯಕ್ರಮವನ್ನು ನೆರವೇರಿಸಲಾಯಿತ್ತು.
ಕಾರ್ಯಕ್ರದನೇತೃತ್ವವನ್ನು ವಹಿಸಿ ಮಾತನಾಡಿದ ಸವಿತಾ ಸಮಾಜದ ಪೀಠಾಧಿಪತಿ ಶ್ರೀ ಶ್ರೀಧರನಂದ ಸ್ವಾಮೀಜಿ ಅಗ್ನಿಹೋತ್ರ ಮಾಡುವುದರಿಂದ ಮನಸ್ಸು, ದೇಹ ಮತ್ತು ನಮ್ಮ ಸುತ್ತಮುತ್ತಲಿನಲ್ಲಿರುವ ಕಲುಷಿತ ವಾತಾವರಣ ಶುದ್ಧ ಗೊಳಿಸುವುದರ ಜೊತೆಗೆ ಭೂಮಿಯ ಮೇಲೆ ಸಕಾರಾತ್ಮಕ ವಾತಾವರಣಕ್ಕೆ ಅನುಕೂಲಮಾಡಿಕೊಡುತ್ತದೆ.
ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಮೇಲೆ ಪ್ರಭಾವ ಬೀರುತ್ತದೆ,ಸೃಷ್ಟಿಯಲ್ಲಿ ಏನೆಲ್ಲ ಇದೆಯೋ ಮತ್ತು ಏನೆಲ್ಲ ಕಾಣಿಸುತ್ತದೆಯೋ, ಅದು ಆ ಪರಮಶಕ್ತಿವಂತ ಈಶ್ವರನದಾಗಿದ್ದು, ನಮ್ಮ ಬಳಿ ಏನೇನು ಇದೆಯೋ, ಅದನ್ನು ಅವನಿಗೆ ಮತ್ತು ಅವಶ್ಯಕತೆ ಇರುವವರಿಗೆ ನೀಡಿ, ಪರೋಪಕಾರಿಯಾದಂತ ಈ ಗೋವುಗಳು ಸೇರಿದಂತೆ ಪ್ರಕೃತಿಯಲ್ಲಿನ ಪ್ರಾಣಿ ಪಕ್ಷಿಗಳ ಬದುಕಿಗಾಗಿ ಪೂರಕವಾಗಿ ನಿಸ್ವಾರ್ಥ ಸೇವೆ ಮಾಡಿ ನಾವು ಆ ಪರಮಾತ್ಮನ ಕೃಪೆಗೆ ಪಾತ್ರರಾಗಬೇಕಾಗಿದೆ ಹೇಳಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಯುವ ಮುಖಂಡ ವಿಠಲ್ ನಾಯಕ, ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ,ರಾಜೇಶ್ ಅಗ್ರವಾಲ, ಗುರುರಾಜ್ ನಾಯಕ್,ಎಚ್ ಸಚಿನ್, ಹೇಮರಾಜ್ ರಾಠೋಡ್, ದೀಪಕ್ ಪೂಜಾರಿ,ಅನಿಲ್ , ಪದ್ಮಾವತಿ ಆಂಜನೇಯ, ನಾಗಶ್ರೀ ನಾಲವಾರಕರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.