ಕಲಬುರಗಿ : ನಗರದ ವಾರ್ಡ.ನಂ.೩೮ ರಲ್ಲಿ ಮಹಾತ್ಮಗಾಂಧಿ ವಿಕಾಸ ಯೋಜನೆಯ ಅಡಿಯಲ್ಲಿ ೪.೦೦ ಕೋಟಿ ರೂಪಾಯಿ ವೆಚ್ಚದ ಹೀರಾಪೂರ ಮುಖ್ಯ ರಸ್ತೆ ಮತ್ತು ಹೀರಾ ನಗರದಲ್ಲಿನ ಒಳರಸ್ತೆಗಳ ನಿರ್ಮಾಣ ಕಾಮಗಾರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಶುಕ್ರವಾರ ಚಾಲನೆ ನೀಡಿದರು.
ಮಾತನಾಡುತ್ತಾ ಕ್ಷೇತ್ರದ ಸವಾಂಗೀಣ ಅಭಿವೃದ್ಧಿಗಾಗಿ ಬದ್ಧವಾಗಿದ್ದು ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಮುಕ್ತಿ ನೀಡು ಪ್ರಾಮಾಣಿಕವಾದ ಅಷ್ಟೇ ಅಲ್ಲದೆ ಕಲ್ಯಾಣಿ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಕೋವಿಡ್-೧೯ ನಿಯಂತ್ರಣಕ್ಕಾಗಿ ಎಲ್ಲಾ ರೀತಿಯ ಸಹಕಾರವನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಮೂರನೇ ಅಲೆನ ತಡೆಗಟ್ಟಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಕಲ್ಬುರ್ಗಿ ಯನ್ನು ಕರೋನಾ ಮುಕ್ತ ನಗರವನ್ನಾಗಿ ಮಾಡಲು ಹಗಲಿರುಳು ನಮ್ಮ ಪಕ್ಷದ ಕಾರ್ಯಕರ್ತರು ನಾವೆಲ್ಲರೂ ಸೇರಿ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಜಿಲ್ಲಾರೈತ ಮೋರ್ಚಾ ಅಧ್ಯಕ್ಷ ಪ್ರಕಾಶ ಪಾಟೀಲ್ ಹಿರಾಪೂರ, ಬಿಜೆಪಿ ರೈತ ಮೋರ್ಚ ನಗರಜಿಲ್ಲಾ ಉಪಾಧ್ಯಕ್ಷ ಭೀಮಶಂಕರ ಯಳಮೇಲಿ, ಬಸವರಾಜ ಬಿರೆದಾರ, ಗುರುಸ್ವಾಮಿ ಹಿರೇಮಠ, ಯೋಗೆಶ ಬಿರಾದಾರ, ಕುಪೇಂದ್ರ ಬಿರಾದರ, ಬಾಬುರಾವ ಬಸವಂತವಾಡಿ, ನಾಗಯ್ಯಾ ಗುತ್ತೇದಾರ, ಖಾಲಿದ ಮಿಯಾ, ಪರಮೆಶ್ವರ ಯಳಮೇಲಿ, ಶಿವಯೋಗಿ ದೊಡಮನಿ, ಸುನಿಲ್ ಇನಾಮದಾರ, ರಾಣಾಜೀ ಡಿಪ್ಟಿ, ಚಂದ್ರಕಾಂತ ಪೂಜಾರಿ, ನಾಗಯ್ಯ ಗುತ್ತೆದಾರ, ಬಾಬುರಾವ ಎಸ್.ವಾಡಿ,ಶಿವುಕುಮಾರ ಪದ್ಮಾಜೀ ಇದ್ದರು.
ದತ್ತು ಪಾಟೀಲ್ ಚಾಲನೆ