ಸುರಪುರ: ಕೊರೊನಾ ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಛಾಯಚಿತ್ರಗ್ರಾಹಕರಿಗೆ ಶ್ರೀ ರೇಣುಕಾ ಫೋಟೊ ಸ್ಟುಡಿಯೋ ಮಾಲೀಕರಾದ ರವಿ ಹುಲಕಲ್ ಅವರು ನೆರವಾಗುವ ಮೂಲಕ ಛಾಯಚಿತ್ರಗ್ರಾಹಕರ ಸಂಕಷ್ಟಕ್ಕೆ ಧ್ವನಿಯಾಗಿದ್ದಾರೆ.
ಈ ಕುರಿತು ಭಾನುವಾರ ಮದ್ಹ್ಯಾನ ನಗರದ ೨೦ಕ್ಕೂ ಹೆಚ್ಚು ಜನ ಬಡ ಛಾಯಾಚಿತ್ರಗ್ರಾಹಕರಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿ,ಕೋವಿಡ್ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಛಾಯಾಚಿತ್ರಗ್ರಾಹಕರು ಕೆಲಸವಿಲ್ಲದೆ ತೀವ್ರ ಸಂಕಷ್ಟ ಪಡುವಂತಾಗಿದೆ.ಕಳೆದ ವರ್ಷವೂ ಮದುವೆ ಸೀಜನ್ ಆರಂಭವಾಗುವ ಹೊತ್ತಿಗೆ ಲಾಕ್‌ಡೌನ್ ಘೋಷಣೆಯಾಗಿತ್ತು,ಈ ವರ್ಷವೂ ಕೂಡ ಮದುವೆಗಳು ನಡೆಯುವ ಸಮಯಕ್ಕೆ ಲಾಕ್‌ಡೌನ್ ಘೋಷಣೆಯಾಗಿ ನಮ್ಮೆಲ್ಲ ಛಾಯಾಗ್ರಾಹಕರ ಬದುಕು ದುರಸ್ಥರಗೊಳಿಸಿದೆ.
ಸರಕಾರವೂ ಛಾಯಾಗ್ರಾಹಕರಿಗೆ ದೊಡ್ಡ ನೆರವು ನೀಡಿಲ್ಲ ಇದರಿಂದ ಸಾಲಸೂಲಮಾಡಿ ಫೋಟೊ ಸ್ಟುಡಿಯೋ ನಡೆಸುತ್ತಿರುವ ಛಾಯಾಚಿತ್ರಗ್ರಾಹಕರು ಇಂದು ತುಂಬಾ ತೊಂದರೆಪಡುವಂತಾಗಿದೆ.ಅನೇಕರು ಒಂದೊತ್ತಿನ ಊಟಕ್ಕೂ ಕಷ್ಟಪಡುವಂತಿದೆ,ಇದನ್ನು ಅರಿತು ನಮ್ಮೆಲ್ಲ ಛಾಯಾಚಿತ್ರಗ್ರಾಹಕರಿಗೆ ಅನುಕೂಲವಾಗಲೆಂದು ನಮ್ಮೆಂದ ಸಾಧ್ಯವಾದ ಮಟ್ಟಿಗೆ ನೆರವಾಗುತ್ತಿರುವುದಾಗಿ ತಿಳಿಸಿದರು.
ನಂತರ ಎಲ್ಲಾ ಛಾಯಾಚಿತ್ರಗ್ರಾಹಕರಿಗೆ ಕಿಟ್‌ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಅಮರಬಾಬು ಪ್ರಕಾಶ ಬಡಿಗೇರ ಆನಂದ ಕುಂಬಾರ ಸುಧಾಕರ ಭಾಷ್ಕರರಾವ್ ರಂಗಂಪೇಟೆ ಸೇರಿದಂತೆ ಅನೇಕರಿದ್ದರು.