ಪ್ರೀತಿಯ ವಿರಹ ತೊರೆಯಲಿ ಗಜಲ್ ಕಾವ್ಯ: ತಳವಾರ

0
52

ವಾಡಿ: ಬದಲಾದ ಕಾಲಘಟ್ಟದಲ್ಲಿ ಬರಹಗಾರರೂ ಕೂಡ ಬದಲಾಗಿ ಕಾವ್ಯದ ತಿರುಳಿಗೆ ಹೊಸ ಭಾವ ಬೆರಸಬೇಕಿದೆ. ಸಮಾಜದ ಆಗುಹೋಗುಗಳಿಗೆ ಸ್ಪಂಧಿಸುವ ಮೂಲಕ ಗಜಲ್ ಕಾವ್ಯವನ್ನು ಪ್ರೀತಿ, ಪ್ರೇಮ, ವಿರಹ, ಹತಾಶೆಯಿಂದ ಹೊರ ತಂದು ದೇಶಪ್ರೇಮ ಮೆರೆಯಬೇಕಿದೆ ಎಂದು ಕಲಬುರಗಿ ಎನ್.ವಿ ಕಾಲೇಜಿನ ಉಪನ್ಯಾಸಕ, ಗಜಲ್ ಕವಿ ಡಾ.ಮಲ್ಲಿನಾಥ ಎಸ್.ತಳವಾರ ಹೇಳಿದರು.

ಗಜಲ್ ತೊರೆ ವ್ಯಾಟ್ಸಾಪ್ ಬಳಗದಿಂದ ಏರ್ಪಡಿಸಲಾಗಿದ್ದ ಗಜಲ್ ಕಾವ್ಯದಲ್ಲಿ ದೇಶಪ್ರೇಮ ಎಂಬ ವಿಷಯದ ಕುರಿತ ರಾಜ್ಯ ಮಟ್ಟದ ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರೇಮಿಗಳ ನೋವಿನ ಕಡಲಾಗಿರುವ ಈ ಗಜಲ್ ಕಾವ್ಯ ಸಾಹಿತ್ಯಕ್ಕೆ ದೇಶಪ್ರೇಮದ ಸ್ಪರ್ಶ ನೀಡುವ ಹೊಸ ಪರಂಪರೆ ಯುವ ಕವಿಗಳಿಂದ ಶುರುವಾಗಬೇಕು. ಪ್ರೀತಿಯೇ ಬದುಕಿನ ಸ್ಥಾಯೀ ಭಾವವಾದರೂ ಭೀತಿಯೇ ನಮ್ಮ ಜೀವನವನ್ನು ಮುನ್ನಡೆಸುತ್ತದೆ. ಗಜಲ್ ಎಂದರೆ ಕರುಣೆಯ ಬಧುಬಟ್ಟಲು, ಸಂತೈಸುವ ತಾಯಿ ಮಡಿಲು. ನೋವು ಹಂಚಿಕೊಳ್ಳುವ ಮಧುಶಾಲೆ. ಯಾವೂದೇ ಸಾಹಿತ್ಯ ಪ್ರಕಾರವಾಗಲಿ ಅದು ಸಮಾಜದ ವಾಸ್ತವತೆಗೆ ಸ್ಪಂದಿಸದಿದ್ದರೆ ಅದಕ್ಕೆ ಮೌಲ್ಯವಿರುವುದಿಲ್ಲ. ಗಜಲ್ ಸಾಹಿತ್ಯವೂ ಕೂಡ ಪ್ರೇಮಕ್ಯಾವ್ಯದ ಜತೆಗೆ ಸಮಾಜಮುಖಿಯಾಗಿ ಬದಲಾಗದಿದ್ದರೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ ಎಂದು ಎಚ್ಚರಿಸಿದರು.

Contact Your\'s Advertisement; 9902492681

ಗಜಲ್ ಸಾಹಿತ್ಯವನ್ನು ಕೆಲ ಕವಿಗಳು ದೇಶಪ್ರೇಮದತ್ತ ತಿರುಗಿಸಿ ಸೈ ಎನ್ನಿಸಿಕೊಂಡಿದ್ದಾರೆ. ಕ್ರಾಂತಿಯ ಜ್ವಾಲೆಯ ಬಿಸಿಗೆ ಕಾಯ್ದುಬಿಟ್ಟಿವೆ ನೋಡು ತರುಣರೆಲ್ಲರ ತಲೆಗಳೀಗಾಗಲೇ ಬಿರುಗಾಳಿ ಅತಿ ವೇಗದಿಂದಲೇ ಬರಲಿಹುದು ಅರಸೊತ್ತಿಗೆಯ ಬೆಳಕೆ ನೀ ತಿಳಿದು ನೋಡು ಎಂದು ಬ್ರಿಟೀಷರ ವಿರುದ್ಧ ಸಿಡಿದ ಗಜಲ್ ಸಾಲುಗಳು ದೇಶಪ್ರೇಮವನ್ನು ಜಾಗೃತಗೊಳಿಸುತ್ತವೆ. ಸರಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೇ ಹೈ ದೇಖನಾ ಹೈ ಜೋರ್ ಕಿತನಾ ಬಾಜು-ಇ-ಕಾತಿಲ್ ಮೇ ಹೈ ಎಂಬ ಕ್ರಾಂತಿಕಾರಿ ಸಾಹಿತ್ಯ ಕೊಲ್ಲುವ ಶತ್ರುಗಳ ಕೈಗಳಲ್ಲಿ ಎಷ್ಟು ಬಲವಿದೆ ನೋಡೇ ಬಿಡೋಣ ಎಂದು ಕೆಚ್ಚೆದೆಯಿಂದ ಸವಾಲು ಹಾಕುತ್ತದೆ. ಮಂದಿರೊ ಮಸಜಿದೊ ಸೆ ಬಡಾ ದೇಶ್ ಹೈ ಕ್ಯೂ ವತನ್ ಕೆ ಲಿಯೆ ಸರ್ ಜುಕಾತೆ ನಹೀ ಎಂಬ ಸಾಲು ಧರ್ಮಬೇಧವನ್ನು ಧಿಕ್ಕರಿಸಿ ಒಗ್ಗಟ್ಟಿಗೆ ಕರೆ ನೀಡುತ್ತದೆ.

ಹೀಗೆ ಗಜಲ್ ಸಾಹಿತ್ಯದಲ್ಲೂ ರಾಷ್ಟ್ರಪ್ರೇಮ ಮರೆದಿರುವ ಕವಿಗಳನ್ನು ಇಂದಿನ ಯುವ ಗಜಲ್ ಬರಹಗಾರರು ಹಿಂಬಾಲಿಸಬೇಕು ಎಂದು ಕರೆ ನೀಡಿದರು. ಗಜಲ್ ಸರಣಿ ಉಪನ್ಯಾಸ ಮಾಲಿಕೆ ಆಯೋಜಿಸಿದ ಗಜಲ್ ತೊರೆ ಬಳಗದ ಶಿವುಕುಮಾರ ಕರನಂದಿ ಗುಳೇದಗುಡ್ಡ, ಸಾವನ್ ಕೆ.ಸಿಂದನೂರ, ಚಂದ್ರಶೇಖರ ಪೂಜಾರ ಬೈಲಹೊಂಗಲ, ನೂರ್ ಅಹ್ಮದ್ ನಾಗನೂರ ಹಾಗೂ ಸಿಕಂದರ್ ಅಲಿ ಬಳ್ಳಾರಿ ಹಾಗೂ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here