ಸುರಪುರ: ತಾಲ್ಲೂಕಿನ ರುಕ್ಮಾಪುರ ಗಾಮದಲ್ಲಿ ಕೊಟ್ಟೂರ ಬಸವೇಶ್ವರ ಶಿಕ್ಷಣ ಸಂಸ್ಥೆ ಹಾಗು ಕನ್ನಡ ಸಾಹಿತ್ಯ ಹಾಗು ಸಾಂಸ್ಕೃತಿಕ ಸಂಘ ರುಕ್ಮಾಪುರದ ವತಿಯಿಂದ ಶಹಾಪುರ ಮಕ್ಕಳ ಸಾಹಿತಿ ಹಾಗು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಂದ್ರಕಾಂತ ಕರದಳ್ಳಿಯವರನ್ನು ಸನ್ಮಾನಿಸಲಾಯಿತು.
ಸನ್ಮಾನಗೊಂಡು ಸಾಹಿತಿ ಚಂದ್ರಕಾಂತ ಕರದಳ್ಳಿ ಮಾತನಾಡಿ,ನಾನು ಸುಮಾರು ಐವತ್ತು ವರ್ಷಗಳಿಂದ ಕಷ್ಟ ಪಡುತ್ತಾ ಮಕ್ಕಳಿಗಾಗಿ ರಚಿಸಿದ ಕೃತಿಗಳಿಗೆ ಪ್ರಶಸ್ತಿ ಲಭಿಸಿದ್ದು ಖುಷಿ ತಂದಿದೆ ಹಾಗು ಇನ್ನೂ ಹೆಚ್ಚಿನ ಕೃತಿಗಳನ್ನು ಬರೆಯಲು ಪ್ರೇರಣೆಯಾಗಿದೆ ಎಂದರು.ಅಲ್ಲದೆ ಇಂದು ನನ್ನ ಸಾಹಿತ್ಯವನ್ನು ಗುರುತಿಸಿ ಸನ್ಮಾನಿಸುತ್ತಿರುವ ಕೊಟ್ಟೂರು ಬಸವೇಶ್ವರ ಶಿಕ್ಷಣ ಸಂಸ್ಥೆ ಮತ್ತು ಕನ್ನಡ ಸಾಹಿತ್ಯ ಹಾಗು ಸಾಂಸ್ಕೃತಿಕ ಸಂಘ ಇನ್ನೂ ಹೆಚ್ಚೆಚ್ಚು ಸಾಹಿತಿಗಳ ಗುರುತಿಸಿ ಪ್ರೇರಣೆ ನೀಡಲೆಂದರು.
ಮುಖ್ಯ ಅತಿಥಗಳಾಗಿ ಭಾಗವಹಿಸಿದ್ದ ತಾಲ್ಲುಕು ಉಪ ಖಜಾನೆ ಸಹಾಯಕ ಅಧಿಕಾರಿ ಡಾ: ಮೋನಪ್ಪ ಶಿರವಾಳ ಮಾತನಾಡಿ,ಚಂದ್ರಕಾಂತ ಕರದಳ್ಳಿಯವರು ತಮ್ಮ ಸಾಹಿತ್ಯದ ಮೂಲಕ ಎಲ್ಲರಿಗೆ ಪರಿಚಿತರು,ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೂಲಕ ನಾಡಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ ಎಂದರು.
ರುಕ್ಮಾಪುರ ಹಿರೇಮಠ ಸಂಸ್ಥಾನದ ಗುರು ಶಾಂತಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಇದೇ ಸಂದರ್ಭದಲ್ಲಿ ನಿವೃತ್ತ ಎಸ್.ಪಿ ಚಂದ್ರಕಾಂತ ಭಂಡಾರೆಯವರ ಮಾತೋಶ್ರೀ ಭೀಮಬಾಯಿ ಎನ್.ಭಂಡಾರೆಯವರ ಸ್ಮರಣಾರ್ಥ ಸುಮಾರು ನೂರ ಎಂಬತ್ತು ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ಹಾಗು ನಿವೃತ್ತ ಪ್ರಾಂಶುಪಾಲ ಬಸವರಾಜ ಬಡಗಾರವರು ಮಕ್ಕಳಿಗೆ ಉಚಿತ ನೋಟಬುಕ್ ವಿತರಿಸಿದರು.ಸಾಹಿತಿ ಶಾಂತಪ್ಪ ಬೂದಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಚಂದ್ರಕಾಂತ ಭಂಡಾರೆ ಉಪಸ್ಥಿತರಿದ್ದರು.
ಡಾ: ಬಸವರಾಜ ಬಾಅವಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಗಣ್ಣ ಸಿರಗೋಳ ನಿರೂಪಿಸಿದರು,ಶಿಕ್ಷಕಿ ಪ್ರಭಾವತಿ ವಂದಿಸಿದರು.ಗಿರಿಜಾ ಮಿಣಜಿಗಿ,ಉಷಾ ಪಾಟೀಲ,ಶಂಕ್ರಮ್ಮ,ಶಕುಂತಲಾ,ಅರುಣಕುಮಾರಿ ಸೇರಿದಂತೆ ಶಾಲೆಯ ಎಲ್ಲಾ ಸಿಬ್ಬಂದಿ ಹಾಗು ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.