ಸುರಪುರ ಅರಸರು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು: ರಾಜಾ ಮದನಗೋಪಾಲ ನಾಯಕ

1
285

ಸುರಪುರ: ಟಿಪ್ಪು ಸುಲ್ತಾನ ತನ್ನ ದತ್ತು ಮಕ್ಕಳಿಗಾಗಿ ಹೊರಾಡಿದನು,ಆದರೆ ಸುರಪುರ ಅರಸರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು ಎಂದು ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿದರು.

ನಗರದ ಹೊಸ ದರಬಾರದ ಕನ್ನಡಿ ಮಹಲ್‌ನಲ್ಲಿ ಹಮ್ಮಿಕೊಂಡಿದ್ದ ಸುರಪುರ ಕಥನ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ,ಸುರಪುರ ಇತಿಹಾಸ ಡಿಸ್ಕವರಿ ಆಫ್ ಇಂಡಿಯಾದಲ್ಲಿ ದಾಖಲಿಸಿಲ್ಲ,ಅಲ್ಲದೆ ಅನೇಕರು ಸುರಪುರ ಇತಿಹಾಸದ ಬಗ್ಗೆ ತಪ್ಪು ತಪ್ಪಾಗಿ ಬರೆಯುತ್ತಿದ್ದಾರೆ ಇದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ವನದುರ್ಗದ ಇತಿಹಾಸವನ್ನು ಹೊರತರುವ ಕೆಲಸ ಆಗಬೇಕು ಹಾಗು ಪ್ರವಾಸೋದ್ಯಮ ಇಲಾಖೆ ಇಲ್ಲಿಯ ಸ್ಮಾರಕಗಳನ್ನು ಮತ್ತು ನಗರದಲ್ಲಿಯ ಬಾವಿಗಳನ್ನು ಪುನಶ್ಚೇತನಗೊಳಿಸಬೇಕೆಂದರು.

Contact Your\'s Advertisement; 9902492681

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಾಗಲಕೋಟೆಯ ವಿಜಯ ಮಹಾಂತೇಶ್ವರ ಮಠದ ಶರಣ ಬಸವಲಿಂಗ ಮಹಾಸ್ವಾಮಿ ಮಾತನಾಡಿ,ಸುರಪುರ ಇತಿಹಾಸವು ಅಭೂತಪೂರ್ವವಾದುದು ಇತಿಹಾಸ ತಿಳಿಯದವನು ಇತಿಹಾಸ ನಿರ್ಮಿಸಲಾರದು,ಆದ್ದರಿಂದ ಎಲ್ಲರು ಈ ಇತಿಹಾಸ ತಿಳಿಯಬೇಕು ಹಾಗು ಪ್ರತಿಯೊಬ್ಬರ ಆರೋಗ್ಯ ರಕ್ಷಿಸಿಕೊಳ್ಳುವುದು ಮುಖ್ಯ ಅದಕ್ಕಾಗಿ,ಯೋಗ,ವ್ಯಾಯಮ ಮತ್ತು ತ್ರಾಟಕ ಹಾಗು ಶಿವಯೋಗ ಮಾಡುವದು ಮುಖ್ಯವಾಗಿದೆ ಎಂದರು.

ಸುರಪುರ ಕಥನ ಕೃತಿ ಸಂಸ್ಕೃತ ದಿಂದ ಕನ್ನಡಕ್ಕೆ ಅನುವಾದಿಸಿದ ಪಂಡೀತ ಜನಾರ್ಧನ ಪಾಣಿಭಾತೆ ಮಾತನಾಡಿ,ನನ್ನ ಗುರುಗಳಾದ ಪೆರುಮಾಳ ಗುಂಡಾಚಾರ್ಯರು ಸಂಸ್ಕೃತದಲ್ಲಿ ಬರೆದಿದ್ದ ಕೃತಿಯನ್ನು ಕನ್ನಡಕ್ಕೆ ಅನುವಾದಿಸುವ ಅವಕಾಶ ಲಭಿಸಿದ್ದು ಸಂತೋಷ ತಂದಿದೆ.ಸುರಪುರ ಅರಸರ ಶೌರ್ಯ ಸಾಹಸ ಮತ್ತು ಅವರ ಆಡಳಿತದ ಕುರಿತು ಬರೆಯುವದೆಂದರೆ ಅದೊಂದು ಹೆಮ್ಮೆಯ ಸಂಗತಿಯಾಗಿದೆ.ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಆತ್ಮಹತ್ಯೆ ಮಾಡಿಕೊಂಡರೆಂದು ಅನೇಕರು ಕಲ್ಪಿತ ಇತಿಹಾಸ ಹೇಳುತ್ತಾರೆ,ಆದೆರೆ ಗುಂಡಾಚಾರ್ಯರು ಸಂಸ್ಕೃತ ಗ್ರಂಥದಲ್ಲಿ ಉಲ್ಲೇಖಿಸಿದಂತೆ ವೆಂಕಟಪ್ಪ ನಾಯಕರು ಆತ್ಮಹತ್ಯೆ ಮಾಡಿಕೊಂಡಿಲ್ಲ,ಅವರನ್ನು ಮೋಸದಿಂದ ಕೊಲ್ಲಲಾಗಿದೆ ಎಂಬುದನ್ನು ಹಾಗು ಸುರಪುರ ಸಂಸ್ಥಾನದ ಅನೇಕ ಸಂಗತಿಗಳ ಬಗ್ಗೆ ಕೃತಿಯಲ್ಲಿ ಕಾಣಬಹುದಾಗಿದೆ ಎಂದರು.

ಚಿತ್ರ ಕಲಾವಿದ ವಿಜಯ ಹಾಗರಗುಂಡಿಗಿ ಕೃತಿ ಬಿಡುಗಡೆಗೊಳಿಸಿದರು.ರಾಜಾ ಕೃಷ್ಣಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು.ವೇದಿಕೆ ಮೇಲಿದ್ದ ಸಾಹಿತಿ ಭಾಸ್ಕರರಾವ್ ಮುಡಬೂಳ,ಕಲಬುರಗಿಯ ನ್ಯಾಯವಾದಿ ಶರಣಬಸವಪ್ಪ ನಿಷ್ಠಿ ಮಾತನಾಡಿದರು.ಶಿವಲಿಂಗಮ್ಮ ಚಿನ್ನಾಕಾರ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಕುರಿತು ಜಾನಪದ ಹಾಡು ಹಾಡಿದರು.ಇದೇ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ಪಡೆದಿರುವ ಸುರಪುರ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.ಶ್ರೀಹರಿರಾವ್ ಆದವಾನಿ ಪ್ರಾರ್ಥನೆ ಗೀತೆ ಹಾಡಿದರು.ರಾಜಗೋಪಾಲ ವಿಭೂತೆ ಪ್ರಾಸ್ತಾವಿವಾಗಿ ಮಾತನಾಡಿದರು.ವಿರೇಶ ಉಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿ ಪೆರುಮಾಳ ಗುಂಡಾಚಾರ್ಯರ ವಂಶಜರಾದ ರಾಜೇಂದ್ರಚಾರ್ಯ, ಭರತ್, ರಾಮಚಂದ್ರಾಚಾರ್ಯ, ಪಿ.ಕೌಸ್ತುಬ,ವಿಜಯ ರಾಘವನ್,ಕೃಷ್ಣಾ ಸುಬೇದಾರ,ಸಾಹಿತಿ ಎ.ಕೃಷ್ಣಾ,ನಾಗಪ್ಪ ತ್ರಿವೇದಿ,ಶಾಂತಪ್ಪ ಬೂದಿಹಾಳ,ರಾಜಾ ಪಿಡ್ಡನಾಯಕ,ಇಕ್ಬಾಲ ರಾಹಿ,ಬಸವರಾಜ ಜಮದ್ರಖಾನಿ,ಉಪೇಂದ್ರ ನಾಯಕ ಸುಬೇದಾರ, ಸಿದ್ದಯ್ಯ ಸ್ವಾಮಿ,ಬಸವರಾಜ ಕೊಡೇಕಲ್,ಪ್ರಕಾಶ ಅಲಬನೂರ,ನಾಗಲಿಂಗಪ್ಪ ಶಾಪೂರಕರ್,ಪ್ರಕಾಶಚಂದ್ ಜೈನ್,ಪರಶುರಾಮ ನಾಯಕ,ಶೇಖರ ಹೆಬ್ಬಾಳ,ಮಹಾಂತೇಶ ಗಿಂಡಿ,ವೆಂಕಟೇಶ ಕುಲಕರ್ಣಿ,ಅಂಬರೀಶ ಸೋನಿ,ಶಿವರಾಜ ರುಕ್ಮಾಪುರ,ನಾಗರಾಜ ಕುಂಟೋಜಿ ಸೇರಿದಂತೆ ಅನೇಕರಿದ್ದರು.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here