ಕಾರಣ’ವಿಲ್ಲದ ಕೃತಿಗಳೇ ಇಲ್ಲ : ಸಾಹಿತಿ ಶೇರಿ ಅಭಿಮತ

0
15

ಸೇಡಂ: ವಿನಾಕಾರಣ ಪುಸ್ತಕಗಳು ಪ್ರಕಟವಾಗಿರುವ ಉದಾಹರಣೆಗಳೇ ಇಲ್ಲ. ಕಾರಣ ಇದ್ದುಕೊಂಡೇ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಅವೆಲ್ಲವೂ ಕಾರಣಯುಕ್ತವಾಗಿವೆ ಎಂದು ಹಿರಿಯ ಲೇಖಕ ಲಿಂಗಾರೆಡ್ಡಿ ಶೇರಿ ಅಭಿಪ್ರಾಯಪಟ್ಟರು.

ಪಟ್ಟಣದ ರಾಮಚಂದ್ರ ಬಡಾವಣೆಯ `ಅಮ್ಮ’ ಸಭಾಂಗಣದಲ್ಲಿ ಸಂಸ್ಕøತಿ ಪ್ರಕಾಶನ ಹಾಗೂ ರಾಷ್ಟ್ರಕೂಟ ಪುಸ್ತಕ ಮನೆ ಜಂಟಿಯಾಗಿ ಆಯೋಜಿಸಿದ್ದ ಪ್ರಭಾಕರ ಜೋಶಿ ಅವರ `ರಂಗಕಾರಣ’ ಮತ್ತು ಮಹಿಪಾಲರೆಡ್ಡಿ ಮುನ್ನೂರ್ ಅವರ `ಕೃತಿಕಾರಣ’ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರಂಗಭೂಮಿ ನಂಟಿನ ಬರಹಗಳು ಮತ್ತು ಪುಸ್ತಕಗಳ ವಿಮರ್ಶೆಯ ನೆಲೆಯಲ್ಲಿ ಕಂಡುಕೊಂಡ ಲೇಖನಗಳ ಸಂಕಲನಗಳನ್ನು `ಕಾರಣ’ವಿಲ್ಲದೇ ಓದತೊಡಗಬೇಕಾಗಿದೆ. ರಾಜಧಾನಿ ಸುತ್ತಮುತ್ತಲಿರುವ ಲೇಖಕರು ಸೇಡಂ ಕಡೆಗೆ ನೋಡುವಂತಹ ವಾತಾವರಣ ಮೂಡಿಸುತ್ತಿರುವ ನೆಲದ ಬಳ್ಳಿಗಳೆರಡು ಆಕಾಶದೆತ್ತರಕ್ಕೆ ಹಬ್ಬುತ್ತಿರುವುದಕ್ಕೆ ಅಭಿಮಾನ ಉಂಟಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ರಂಗಕಾರಣ ಕುರಿತು ಹಿರಿಯ ಲೇಖಕ ಡಾ.ಎಂ.ಜಿ.ದೇಶಪಾಂಡೆ ಮತ್ತು ಕೃತಿಕಾರಣ ಕುರಿತು ಹಿರಿಯ ಲೇಖಕಿ ಡಾ.ಚಂದ್ರಕಲಾ ಬಿದರಿ ಪರಿಚಯ ಮಾಡಿಕೊಟ್ಟರು.
ಮುಖ್ಯ ಅತಿಥಿಗಳಾಗಿದ್ದ ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ ಮಾತನಾಡಿದರು. ಹಿರಿಯ ವಿದ್ವಾಂಸ ಡಾ.ವಾಸುದೇವ ಅಗ್ನಿಹೋತ್ರಿ ಅಧ್ಯಕ್ಷತೆ ವಹಿಸಿದ್ದರು.

ಲೇಖಕರಾದ ಪ್ರಭಾಕರ ಜೋಶಿ ಮತ್ತು ಮಹಿಪಾಲರೆಡ್ಡಿ ಮುನ್ನೂರ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಿದ್ದಪ್ರಸಾದರೆಡ್ಡಿ ನಿರೂಪಿಸಿದ ಕಾರ್ಯಕ್ರಮದಲ್ಲಿ ವಿಜಯಭಾಸ್ಕರರೆಡ್ಡಿ ಸ್ವಾಗತಿಸಿದರು. ಆದಿತ್ಯ ಜೋಶಿ ವಂದಿಸಿದರು. ಮಹೇಶ ಅಲ್ಲೂರು ಭಾವಗೀತೆ ಹಾಡಿದರು.
ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ ಇಬ್ಬರು ಲೇಖಕರನ್ನು ಸನ್ಮಾನಿಸಲಾಯಿತು.

ಮಸಾಪ ಅಧ್ಯಕ್ಷೆ ಆರತಿ ಕಡಗಂಚಿ, ರುಕ್ಮಿಣಿ ಕಾಳಗಿ, ಕವಿತಾ, ಶಿಲ್ಪಾ ಕೊಳ್ಳಿ, ನಾಟಕ ನಿರ್ದೇಶಕ ಅಶೋಕ ತೊಟ್ನಳ್ಳಿ, ಪ್ರೊ.ಬಿ.ಆರ್.ಅಣ್ಣಾಸಾಗರ, ಕವಿ ಸಂತೋಷ ತೊಟ್ನಳ್ಳಿ, ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ಶರಣಗೌಡ ಪಾಟೀಲ, ಶ್ರೀಪಾದ ಜೋಶಿ, ಶಿವು ಅಪ್ಪಾಜಿ, ನೀಲಕಂಠ ಮುತ್ತಗಿ, ಶರಣಪ್ಪ ಎಳ್ಳಿ, ವಿಷ್ಣುವರ್ಧನರೆಡ್ಡಿ, ಶ್ರೀಧರ ಗಡಾಳೆ, ಬಸವರಾಜ ಬಾಳಿ, ರತ್ನಕಲಾ, ಸುರೇಖಾ, ಭಾಗ್ಯ, ಕಾರ್ತಿಕರೆಡ್ಡಿ, ಮಹಾದೇವರೆಡ್ಡಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here