ದೇಶದ ಅವೈಜ್ಞಾನಿಕ ಪದ್ದತಿಯನ್ನೆ ಬದಲಾಯಿಸಿದ ಮಹಾನ್ ವ್ಯಕ್ತಿ ಅಂಬೇಡ್ಕರ್

0
52

ಶಹಾಬಾದ: ಹುಟ್ಟಿನಿಂದ ಹಿಡಿದು ಅವರ ಕೊನೆ ಉಸಿರು ಇರುವ ತನಕ ಅನೇಕ ಹೋರಾಟಗಳನ್ನು ಮಾಡಿ ಈ ದೇಶದಲ್ಲಿರುವ ಅವೈeನಿಕ ಪದ್ದತಿಯ ದಿಕ್ಕನ್ನೇ ಬದಲಾಯಿಸಿ ಹೊಸ ಬದಲಾವಣೆಯನ್ನು ತಂದಂತಹ ಮಹಾನ್ ವ್ಯಕ್ತಿ ಡಾ|ಬಿ.ಆರ್.ಅಂಬೇಡ್ಕರ್ ಎಂದು ಕ.ರಾ.ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಹೇಳಿದರು.

ಅವರು ಹೊನಗುಂಟಾ ಗ್ರಾಮದ ಭೀಮ ನಗರದಲ್ಲಿ ದಸಂಸ ವತಿಯಿಂದ ಆಯೋಜಿಸಲಾದ ನಮ್ಮ ನಡೆ ಪ್ರಬುದ್ಧ ಭಾರತದ ಕಡೆ ಹಾಗೂ ಭೀಮ ಕ್ರಾಂತಿ ಗೀತೆಗಳ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ಇಂದು ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸಬಾಕಾದವರು ಬೇಕಾಗಿದೆ. ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪೂಜೆ ಮಾಡುವುದಕ್ಕಿಂತಲೂ ಅವರ ಚರಿತ್ರೆಯನ್ನು ಅರಿತು ನಡೆಯಬೇಕಾಗಿದೆ ಎಂದರು.

ಕ.ರಾ.ದಸಂಸ ರಾಜ್ಯ ಸಂಘಟನಾ ಸಂಚಾಲಕ ಅರ್ಜುನ ಭದ್ರೆ ಮಾತನಾಡಿ,ಬಡತನದಲ್ಲಿ ಜನಿಸಿ ಹಲವು ನೋವುಗಳ ಮಧ್ಯೆ ತಮ್ಮ ವಿದ್ಯಾಬ್ಯಾಸವನ್ನು ಪಡೆದ ಅಂಬೇಡ್ಕರ್ ಅವರು ಜಗತ್ತಿನ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅಮೇರಿಕಾ, ಇಂಗ್ಯೆಂಡ್, ಐರ್ಲೆಂಡ್ ದೇಶದ ಪ್ರಮುಖ ಅಂಶ ತೆಗೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತ ಸಂವಿಧಾನ ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ಕೀರ್ತಿ ಇದೆ ಎಂದರು.

ತಾಪಂ ಅಧ್ಯಕ್ಷೆ ಸಂಗೀತಾ ದೇವೆಂದ್ರ ಕಾರೊಳ್ಳಿ, ಗ್ರಾಪಂ ಅಧ್ಯಕ್ಷೆ ಭೀಮಬಾಯಿ ಮಲ್ಲಪ್ಪ, ಗ್ರಾಪಂ ಉಪಾಧ್ಯಕ್ಷ ತಿಪ್ಪಣ್ಣ ಚಡಬಾ, ಮುಖಂಡರಾದ ಮೆಹಬೂಬ ಪಟೇಲ್, ಭೀಮಾಶಂಕರ ಖೇಣಿ, ಮರೆಪ್ಪ ಮೇತ್ರೆ, ಉದಯಕುಮಾರ ಸಾಗರ, ಪೀರಪಾಶಾ, ಆನಂದ ಕೊಡಸಾ, ಶಿವಯೋಗಿ ಮೇತ್ರೆ, ಶಿವಪುತ್ರ ಕರಣಿಕ್, ಬಸಮ್ಮ.ಎಸ್.ವಾರಕರ್,ಇಸ್ಮಾಯಿಲ್ ಷಾ, ಕಾಂತಮ್ಮ ಮರೆಪ್ಪ, ಸಂಗಣ್ಣ ಇಜೇರಿ, ಶರಣಬಸವ.ಎಮ್,ರಾಜು.ಡಿ, ಶಂಕ್ರಮ್ಮ ಭೀಮರಾಯ, ನಾಜಮೀನ ಮೈಮೂದ, ಕಾವೇರಿ ಪ್ರಭುರಾವ ಶಿವಮ್ಮ ಸಂಗಣ್ಣ, ಮಲ್ಲಮ್ಮ ಬಸಪ್ಪ, ನಿಂಗಮ್ಮ ಈರಪ್ಪ, ಶಿವರುದ್ರ ಗಿರೇನೂರ,ಮಲ್ಲಣ್ಣ ಮಸ್ಕಿ, ಮಲ್ಲಿಕಾರ್ಜುನ ಹಳ್ಳಿ,ಮಲ್ಕಪ್ಪ ಮುದ್ದಾ,ಮಲ್ಲಣ್ಣ ಕಾರೊಳ್ಳಿ, ಸಾಬಣ್ಣ ಕೊಲ್ಲೂರ್,ರಾಯಪ್ಪ ಹುರಮುಂಜಿ, ಮಲ್ಲೇಶಿ ಭಜಂತ್ರಿ, ವಿಶ್ವರಾಜ ಫೀರೋಜಬಾದ ಸೇರಿದಂತೆ ನಏಕ ಜನರು ಇದ್ದರು. ಭೀಮಕ್ರಾಂತಿ ಗೀತೆಯ ಗಾಯಕ ಸಿದ್ಧಾರ್ಥ ಚಿಮ್ಮ ಇದ್ಲಾಯಿ ಗೀತೆಗಳನ್ನು ಹಾಡಿದರು.

ಪೂಜಪ್ಪ ಮೇತ್ರೆ ನಿರೂಪಿಸಿದರು, ರಾಘವೇಂದ್ರ ಗುಡೂರ ಸ್ವಾಗತಿಸಿದರು, ಶರಣಬಸಪ್ಪ.ಎಂ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here