ವಿವಿಧ ಬೇಡಿಕೆ ಈಡೇರಿಸುವಂತೆ ಅಂಗನವಾಡಿ ನೌಕರರ ಸಂಘ ಪ್ರತಿಭಟನೆ

0
39

ಶಹಾಬಾದ: ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ಕರೆಯ ಮೇರೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ನೌಕರರ ಸಂಘ(ಸಿ.ಐ.ಟಿ.ಯು) ಸೋಮವಾರ ಪ್ರತಿಭಟನೆ ನಡೆಸಿ ಸೋಮವಾರ ತಹಸೀಲ್ದಾರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಸಿಐಟಿಯು ತಾಲೂಕಾ ಅಧ್ಯಕ್ಷೆ ಶೇಖಮ್ಮ ಕುರಿ ಮಾತನಾಡಿ, ಅಂಗನವಾಡಿ ನೌಕರರು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಆದರೂ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತಿಲ್ಲ. ಅವರು ತಮ್ಮ ಕುಟುಂಬದ ನಿರ್ವಹಣೆ ಮಾಡುವುದಕ್ಕೆ ತೊಂದರೆಯಾಗುತ್ತಿದೆ.ಅಲ್ಲದೇ ಅವರಿಗೆ ೨೧,೦೦೦ ರೂ.ಕನಿ? ವೇತನ ಹೆಚ್ಚಿಸಿ ಖಾಯಂ ಮಾಡಿ, ನಿವೃತ್ತಿ ವೇತನ ನೀಡಬೇಕು.

Contact Your\'s Advertisement; 9902492681

೨೦೨೦ರ ನೂತನ ಶಿಕ್ಷಣ ನೀತಿಯಿಂದ ಅಂಗನವಾಡಿ ಕೇಂದ್ರಗಳನ್ನು ರಕ್ಷಿಸಬೇಕು, ಅಂಗನವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು ಮತ್ತು ಐಸಿಡಿಎಸ್‌ಗೆ ಪ್ರತ್ಯೇಖ ನಿರ್ದೇಶನಾಲಯವನ್ನು ರಚಿಸಬೇಕು.ಕೋವಿಡ್‌ನಲ್ಲಿ ನಿರತ ಎಲ್ಲಾ ಸಿಬ್ಬಂದಿಗಳ ಕುಂಟುಂಬಕ್ಕೆ ಉಚಿತ ಚಿಕಿತ್ಸೆ ನೀಡಬೇಕು. ಎಲ್ಲರಿಗೂ ೫೦ ಲಕ್ಷ ರೂ. ಜೀವ ವಿಮೆ ವ್ಯಾಪ್ತಿಯಲ್ಲಿ ತರಬೇಕು. ಮಾಸಿಕ ೧೦೦೦೦ ರೂ. ರಿಸ್ಕ್ ಭತ್ಯೆ ಮತ್ತು ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡಬೇಕು.ಅಲ್ಲದೇ೪೫ ನೇ ಐ.ಎಲ್.ಸಿ.ಯ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ನಂತರ ಉಪತಹಸೀಲ್ದಾರ ಮಲ್ಲಿಕಾರ್ಜಿನರೆಡ್ಡಿ ಅವರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕಾರ್ಯದರ್ಶಿ ರುದ್ರಮ್ಮ, ಗ್ರಾಪಂ ನೌಕರರ ಸಂಘದ ಮಲ್ಲಣ್ಣ ಕಾರೊಳ್ಳಿ ಸೇರಿದಂತೆ ಅಂಗನವಾಡಿ ನೌಕರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here