ಪ್ರಜಾಪ್ರಭುತ್ವದ ಉಳಿವಿಗೆ ಪತ್ರಕರ್ತರ ಪಾತ್ರ ದೊಡ್ಡದಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ

0
154

ಕಲಬುರಗಿ: ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿವು ಹಾಗೂ ಬೆಳವಣಿಗೆಗೆ ನಾಲ್ಕನೆಯ ಅಂಗ ಎಂದು ಕರೆಸಿಕೊಳ್ಳುವ ಪತ್ರಿಕಾರಂಗದ ಪ್ರಾಮುಖ್ಯತೆಯಿದ್ದು ಹಾಗಾಗಿ ಪತ್ರಕರ್ತರು ನೈಜ ಸುದ್ದಿಗಳನ್ನು‌ ಸರಳೀಕರಣಗೊಳಿಸಿ ಜನರಿಗೆ ತಲುಪಿಸುವಲ್ಲಿ ಗಮನ‌ ಕೊಡಬೇಕು ಎಂದು ಸಮಾಜಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ‌ ಸಚಿವರಾದ ಪ್ರಿಯಾಂಕ್ ಖರ್ಗೆ ಕರೆ ನೀಡಿದರು.

Contact Your\'s Advertisement; 9902492681

ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್‌ಸಿ ಹಾಗೂ ಪಿಯುಸಿ ಯಲ್ಲಿ ಹೆಚ್ಚಿನ‌ ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಸನ್ಮಾನಿಸಿ ಗೌರವಿಸಿದರು. 2019-20 ಎಸ್. ಎಸ್.ಟಿ.ವಿ. ಮುಖ್ಯಸ್ಥ ಅಶೋಕಕುಮಾರ ಮಠಪತಿ ಅವರಿಗೆ ವಿ.ಎನ್. ಕಾಗಲಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇದೇವೇಳೆಯಲ್ಲಿ ವಿವಿಧ ಪ್ರಾಯೋಜಕ ಪ್ರಶಸ್ತಿಗಳನ್ನು ಪ್ರವೀಣರೆಡ್ಡಿ, ವಿಜಯಕುಮಾರ ಕುಲಕರ್ಣಿ, ವೀರಣ್ಣಗೌಡ ಪಾಟೀಲ ಯಡ್ಡಳ್ಳಿ, ಅಮ್ಜದ್ ಅಲಿ, ಗುರುಪ್ರಕಾಶ ಮುಗುಳಿ, ಮರೆಪ್ಪ ಬೇಗಾರ, ಶಿವಕುಮಾರ ಹಿರೇಮಠ, ಕರುಣೇಶ, ಗಿರೀಶ ಇಂಡಿ ಇತರರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಕ್ಕಳು ಭವಿಷ್ಯದ ಭಾರತದ ಬುನಾದಿ ಎಂದ ಸಚಿವರು ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ದೇಶದ ಸಂಪನ್ಮೂಲವನ್ನಾಗಿ ನಿರ್ಮಿಸಬೇಕು ಎಂದು ಹೇಳಿದರು.

ಮಂಗಳೂರ ಸಮಾಚಾರ ಪತ್ರಿಕೆ ಪ್ರಾರಂಭ ಹಾಗೂ ಜನರಿಗೆ ತಲುಪಿದ್ದ ರೀತಿ ಅನನ್ಯ ಎಂದು ಗುಣಗಾನ ಮಾಡಿದ ಸಚಿವರು ಅಂದಿನಿಂದ ಇಂದಿನವರೆಗೆ ಪತ್ರಿಕೆಗಳು ಬೃಹದಾಕಾರವಾಗಿ ಬೆಳೆದು ಬಂದಿವೆ ಅದಕ್ಕೆ ಆಯಾ ಕಾಲಕ್ಕೆ ಪತ್ರಕರ್ತರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.

ಪತ್ರಿಕೆಗಳ ಹಾಗೂ ಮಾಧ್ಯಮಗಳ ವರದಿಗಳು ಸರಕಾರದ ಮೇಲೆ ನೇರ ಪರಿಣಾಮ ಬೀರುತ್ತವೆ. ಹಾಗಾಗಿ ಪತ್ರಿಕೆಗಳಿಗೆ ಒದಗಿಸಲಾಗಿರುವ ಮುಕ್ತ ಸ್ವಾತಂತ್ರ್ಯವನ್ನು ಸದ್ಭಳಕೆ ಮಾಡಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಪತ್ರಕರ್ತರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು ಪತ್ರಕರ್ತರಿಗೆ ನಿವೇಶನ ಒದಗಿಸಲು ಸಿಂದಗಿ ( ಬಿ) ಗ್ರಾಮದ ಬಳಿ ೨೦ ಎಕರೆ ಜಾಗ ಗುರುತಿಸಲಾಗಿದೆ. ಈ ಕುರಿತು ಸಚಿವಸಂಪುಟದಲ್ಲಿ ಚರ್ಚಿಸಿ ಶೀಘ್ರದಲ್ಲಿಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನುಳಿದಂತೆ ಪತ್ರಿಕಾಭವನವನ್ನು ಪತ್ರಕರ್ತರ ಸಂಘದ‌ ಸುಪರ್ದಿಗೆ ವಹಿಸುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗುವುದು ಎಂದಯ ಭರವಸೆ ನೀಡಿದರು.

ಜೊತೆಗೆ ಕಾಗಲಕರ್ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಸರಕಾರದ ವತಿಯಿಂದಲೇ ನೀಡುವ ಕುರಿತು ಚರ್ಚಿಸಲಾಗುವುದು ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here