ಕಲಬುರಗಿ: ನಗರದ ಶಹಾಬಜಾರನಲ್ಲಿರುವ ಆರಾಧನಾ ಪಿಯು ಕಾಲೇಜಿನಲ್ಲಿ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಇಲಾಖೆ ವತಿಯಿಂದ ಕೊರೋನಾ ಸಂಕಷ್ಟದಲ್ಲಿರುವ ಬಡವರಿಗೆ ಉಚಿತ ಆಹಾರ ಕಿಟ್‌ಗಳನ್ನು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಅವರ ವಿತರಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಮಿಕ ಆಯುಕ್ತರಾದ ಆರತಿ ಪೂಜಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಉದ್ದಿಮೇದಾರ ಮಲ್ಲಿಕಾರ್ಜುನ ಖೇಮಜಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಉತ್ತರ ಮಂಡಲ ಉಪಾಧ್ಯಕ್ಷ ಶಿವಲಿಂಗ ಹಳ್ಳಿಮನಿ, ಆರಾಧನಾ ಪಿಯು ಕಾಲೇಜಿನ ಪ್ರಾಚಾರ್ಯರಾದ ಚೇತನ್‌ಕುಮಾರ ಗಾಜರೆ, ಮುಖಂಡರಾದ ಮಲ್ಲು ಓಕಳ್ಳಿ, ಸಂಜು ಮಂಜಳಕರ್ ಇದ್ದರು.