ಕಲಬುರಗಿ: ನಗರದ ಜಿಮ್ಸ್ ಆಸ್ಪತ್ರೆ ಜೈಲ್ ವಾರ್ಡ್ ಕಿಡಕಿಯಿಂದ ಜಿಗಿದು ಸೆಂಟ್ರಲ್ ಜೈಲ್ನ ವಿಚಾರಣಾಧೀನ ಕೈದಿ ಪರಾರಿಯಾಗಿರುವ ಘಟನೆ ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಿದ್ದಪ್ಪ ಅಲ್ಲೂರ್ (22) ಪರಾರಿಯಾಗಿರೋ ಕೈದಿ. ಸಿದ್ದಪ್ಪ, ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಅಲ್ಲೂರು ಬಿ ಗ್ರಾಮದ ನಿವಾಸಿಯಾಗಿದ್ದು, ಎರಡು ತಿಂಗಳ ಹಿಂದಷ್ಟೇ ಸ್ನೇಹಿತನನ್ನು ಕೊಲೆ ಮಾಡಿ ಜೈಲು ಸೇರಿದ್ದ.
ಕಲಬುರಗಿ ಕೇಂದ್ರ ಕಾರಾಗೃಹ ಕ್ಕೆ ಸೇರಿದ್ದ ಸಿದ್ದಪ್ಪ ನಾಲ್ಕು ದಿನದ ಹಿಂದೆ ಅಸಹಜ ವರ್ತನೆ ಹಿನ್ನೆಲೆಯಲ್ಲಿ ಆಸ್ಪತ್ರೆ ಜೈಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಇಂದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.