ಸರ್ಕಾರ ಕಾರ್ಮಿಕ ವಿರೋಧಿ ನೀತಿ ಮೂಲಕ ಜನರನ್ನು ಮೂಲೆಗುಂಪು ಮಾಡಿದೆ: ಶಂಕರ್ ಕಟ್ಟಿಸಂಗಾವಿ

0
30

ಜೇವರ್ಗಿ: ಕಳೆದೆರಡು ವರ್ಷಗಳಿಂದ ಕರೊನಾ ಮಹಾಮಾರಿಯ ಪರಿಣಾಮದಿಂದಾಗಿ ದುಡಿಯುವ ಜನರು ನರಕಯಾತನೆಯನ್ನು ಅನುಭವಿಸುತ್ತಿದ್ದು ,ಆಳುವ ಸರಕಾರಗಳು ಈ ಕುರಿತಂತೆ ಸರಿಯಾದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ಮೀನಾಮೇಷ ಎಣಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿಯಾಗಿದೆ ಎಂದು ಕಾರ್ಮಿಕ ಮುಖಂಡರಾದ ಶಂಕರ್ ಕಟ್ಟಿಸಂಗಾವಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಜೇವರ್ಗಿ ಇಲ್ಲಿನ ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಕಲಿ ಕಾರ್ಮಿಕರ ಕಾರ್ಡ್ಗಳನ್ನು ಮಾಡಿಸುವ ಮೂಲಕ ನಿಜವಾದ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ದೂರಿದರು.

Contact Your\'s Advertisement; 9902492681

ಲಾಕ್ಡೌನ್ ಪರಿಣಾಮದಿಂದಾಗಿ ತತ್ತರಿಸಿಹೋಗಿರುವ ಕಟ್ಟಡ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 10 ಸಾವಿರ ರೂಪಾಯಿಗಳ ಪರಿಹಾರವನ್ನು ನೀಡಬೇಕೆಂದು ಹಾಗೂ ಅವರ ಮನೆಗಳ ನಿರ್ಮಾಣಕ್ಕಾಗಿ.500000 ರೂಪಾಯಿ ಸಹಾಯಧನ ನೀಡಬೇಕೆಂದು ಆಗ್ರಹಿಸಿದರು,

ಪತ್ರಿಕಾಗೋಷ್ಠಿಯಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಮಹೇಶ್ ಕುಮಾರ್ ರಾಠೊಡ್ ಮಾತನಾಡಿ, ದುಡಿಯುವ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ಸಮ ಮನಸ್ಸಿನ ಎಲ್ಲಾ ಕಾರ್ಮಿಕ ಸಂಘಟನೆಯ ಮುಖಂಡರು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಿದ್ದು ನ್ಯಾಯಯುತವಾದ ದುಡಿಯುವ ಜನರ ಹಕ್ಕಿಗಾಗಿ ಸರಕಾರಕ್ಕೆ ಎಚ್ಚರಿಸಬೇಕಿದೆ ಎಂದು ತಿಳಿಸಿದರು .

ಅಲ್ಲದೆ ಖಾಸಗೀಕರಣ ಹಾಗೂ ಜಾಗತೀಕರಣದ ಮಧ್ಯೆ ದುಡಿಯುವ ಜನರ ಬದುಕು ಕಷ್ಟಕರವಾಗಿದೆ ಇದನ್ನು ಸರಕಾರವೂ ಕಡೆಗಣಿಸಿರುವುದು ಸರಿಯಲ್ಲ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ಸಿಪಿಐ ಪಕ್ಷದ ತಾಲೂಕ ಕಾರ್ಯದರ್ಶಿ ಮಲ್ಲಿಕಾರ್ಜುನ ದೊಡ್ಡಮನಿ ಕೆಲ್ಲೂರ್, ಸೇರಿದಂತೆ ವಿದ್ಯಾರ್ಥಿ ಯುವಜನ ಮುಖಂಡರಾದ ರಾಮನಾಥ ಭಂಡಾರಿ, ರಾಜು ಮುದ್ದಡಗಿ ಹಾಗೂ ಇತರ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here