ಆಳಂದ ಜಗತ್ತನ್ನು ಆವರಿಸಿರುವ ಮಹಾಮಾರಿ ಕೋವಿಡ್ ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಸುಭಾಷ್ ಆರ್ ಗುತ್ತೇದಾರ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಆಳಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಲಸಿಕೆ ಅಭಿಯಾನ ಹಾಗೂ ಅಂಬಿಗರ ಚೌಡಯ್ಯ ಸಾಂಸ್ಕೃತಿಕ ಭವನದ ಗುದ್ದಲಿ ಪೂಜ ನೇರೆವೇರಿಸಿ ಮಾತನಾಡಿದರು.
ಭಾರತ ತಯಾರಿಸಿದ ಲಸಿಕೆ ಇಡೀ ಜಗತ್ತನ್ನು ರಕ್ಷಿಸುತ್ತಿದೆ ಈ ನಿಟ್ಟಿನಲ್ಲಿ ಕೆಲಸ ಮಾಡಿದ ಭಾರತೀಯ ವೈದ್ಯರಿಗೆ ಸರ್ವ ಭಾರತೀಯರ ಪರವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದರು. ರಾಜ್ಯದಲ್ಲಿ ಕೋವಿಡ್ ಸಂಕಷ್ಟ ಇದ್ದಾಗಲೂ ಕೂಡ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನೆಡೆ ಆಗಿಲ್ಲ ಆದರೆ ಅನುದಾನದ ಅಲ್ಪ ಸ್ವಲ್ಪ ಕೊರತೆಯಾಗಿದೆ ಆದರೂ ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೆಎಂಎಫ್ ನಿರ್ದೇಶಕ ಚಂದ್ರಕಾಂತ ಭೂಸನೂರ, ಎನ್ ಈಕೆಎಸ್‌ಆರ್‌ಟಿಸಿ ನಿರ್ದೇಶಕ ಮಲ್ಲಿಕಾರ್ಜುನ ತಡಕಲ, ಮುಖಂಡ ಬಸವರಾಜ ಪೊಲೀಸ್ ಪಾಟೀಲ ಸೇರಿದಂತೆ ಇತರರು ಇದ್ದರು.