ಕಲಬುರಗಿ: ಜಿಲ್ಲೆಯ ಆಳಂದ ಮಂಡಲದ ಭಾರತೀಯ ಜನತಾ ಪಕ್ಷದ ನಗರ ಮಹಾಶಕ್ತಿ ಕೇಂದ್ರಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷರಾಗಿ ಮಹಾಂತೇಶ ಪೂಜಾರಿ, ಉಪಾಧ್ಯಕ್ಷರುಗಳನ್ನಾಗಿ ರಾಜು ಕೊರಳ್ಳಿ, ವಿನಾಯಕ ವೆಂಕಟೇಶ, ಪ್ರಧಾನ ಕಾರ್ಯದರ್ಶಿಯನ್ನಾಗಿ ಆಕಾಶ ಪೊದ್ದಾರ. ಕಾರ್ಯದರ್ಶಿಗಳನ್ನಾಗಿ ಧೀರಜ ಏಣೆಗೂರೆ, ಓಂಕಾರ ಕಾಂಬಳೆ, ಉಮೇಶ ಭೋಸಲೆ, ಅಮೀತ ಪಾಟೀಲ ಖಜಾಂಚಿಯನ್ನಾಗಿ ರವಿ ಪಾಟೀಲ ಸದಸ್ಯರನ್ನಾಗಿ ಸೋಮು ಕುಲಕರ್ಣಿ, ಮಹೇಶ ಕುಲಕರ್ಣಿ, ಮಲ್ಲಿಕಾರ್ಜುನ ಪಗಡೆ, ಅನೀಲ ರಂಗದಾಳ, ಶರಣು ನಾಗದೆ, ಚಂದ್ರಶೇಖರ ಲಂಗೋಟಿ ಅವರನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಅವರ ಸೂಚನೆಯ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ ಕೊರಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.