ಇಎಸ್‍ಐ ಆಸ್ಪತ್ರೆಗೆ ಮತ್ತಿಮಡು ಬೇಟಿ: ಕಾಮಗಾರಿ ವೀಕ್ಷಣೆ

0
25

ಶಹಾಬಾದ: ನಗರದ ಇಎಸ್‍ಐ ಆಸ್ಪತ್ರೆಗೆ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರು ಬೇಟಿ ನೀಡಿ ನವೀಕರಣ ಕಾರ್ಯದ ಕಾಮಗಾರಿಯನ್ನು ವೀಕ್ಷಿಸಿದರು.

ಆಸ್ಪತ್ರೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಬಸವರಾಜ ಮತ್ತಿಮಡು ಅವರು ಕಾಮಗಾರಿಯ ಕುರಿತು ಲೋಕೋಪಯೋಗಿ ಇಲಾಖೆಯ ಎಇ ಜಗನ್ನಾಥ ಅವರಿಗೆÀ ಮಾಹಿತಿ ಹೇಳಿದರು. ಈಗಾಗಲೇ ಇಎಸ್‍ಐ ಆಸ್ಪತ್ರೆಯ ಕಟ್ಟಡ ಕಾಮಗಾರಿಯ ದುರಸ್ತಿ ಹಾಗೂ ನವೀಕರಣ ಕಾರ್ಯ 90% ಮುಗಿದಿದೆ. ರಸ್ತೆ ಕಾಮಗಾರಿ ಹಾಗೂ ವೈದ್ಯರ ಹಾಗೂ ಸಿಬ್ಬಂದಿಗಳ ಗೃಹಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ ಎಂದಿ ಮಾಹಿತಿ ಒದಗಿಸಿದರು.

Contact Your\'s Advertisement; 9902492681

ನಂತರ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಆದಷ್ಟು ಬೇಗನೆ ಕಾಮಗಾರಿಯನ್ನು ಪೂರ್ಣಗೊಳಿಸಿ. ಕಾಮಗಾರಿ ಮಾತ್ರ ಗುಣಮಟ್ಟದಿಂದ ಕೂಡಿರಲಿ.ಪ್ರಗತಿಯಲ್ಲಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಜಗನ್ನಾಥ ಅವರಿಗೆ ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನಗರಸಭೆಯ ಸದಸ್ಯ ರವಿ ರಾಠೋಡ, ನಿಂಗಣ್ಣ ಹುಳಗೋಳಕರ್, ದತ್ತಾ ಫಂಡ್, ನಾಗರಾಜ ಮೇಲಗಿರಿ,ಮಹಾದೇವ ಗೊಬ್ಬೂರಕರ್,ಸದಾನಂದ ಕುಂಬಾರ, ಸಿದ್ರಾಮ ಕುಸಾಳೆ, ಮಂಜುನಾಥ ಪೂಜಾರಿ, ಸುನೀಲ ನಿಕ್ಕಮ್, ಸುಭಾಷ ಜಾಪೂರ, ಭೀಮರಾವ ಸಾಳುಂಕೆ,ಸಂಜಯ ಸೂಡಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here