ಜೇವರ್ಗಿ: ತಾಲೂಕಿನ ಸೊನ್ನ ಗ್ರಾಮದಲ್ಲಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯ ಪತ್ನಿಗೆ ಸೊನ್ನ ಪೂಜ್ಯರಾದ ಡಾ.ಶಿವಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಜೇವರ್ಗಿ ಎಸ್ ಬಿ ಐ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ತರುಣ ಜೋಶಿ ಸಿಬ್ಬಂದಿಗಳಾದ ಅನಂತಕುಮಾರ ಅವರಿಂದ ಎರಡು ಲಕ್ಷ ಪರಿಹಾರವನ್ನು ವಿತರಿಸಲಾಯಿತು.
ಸೊನ್ನ ಗ್ರಾಮದ ರೇವಣಸಿದ್ದಪ್ಪ ಬಸಣ್ಣ ತಳವಾರ ಎಂಬ ವ್ಯಕ್ತಿ ಹೃದಯಾಘಾತದಿಂದ ಕಳೆದ ಆರು ತಿಂಗಳ ಹಿಂದೆ ಮೃತಪಟ್ಟಿದರು.
ಮೃತ ವ್ಯಕ್ತಿ ಜೇವರ್ಗಿ ಪಟ್ಟಣದ ಎಸ್ ಬಿ ಐ ಬ್ಯಾಂಕ್ ನಲ್ಲಿ ಶೂನ್ಯ ಉಳಿತಾಯ ಖಾತೆ ತೆರೆದಿದ್ದನು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ (ಪಿ ಎಮ್ ಎಸ್ ಬಿ ವೈ) ಯೋಜನೆ ಅಡಿಯಲ್ಲಿ 330 ರೂಪಾಯಿಗಳು ಅವನ ಖಾತೆಯಿಂದ ಕಡಿತವಾಗಿತ್ತು ಅಂದು ಆ ಯುವಕ ಮುನ್ನೆಚ್ಚರಿಕೆ ತೆಗೆದುಕೊಂಡ ಪರಿಣಾಮ ಇಂದು ಆತನ ಪರಿವಾರಕ್ಕೆ ಈ ಯೋಜನೆ ಬೆಳಕು ತಂದಿದೆ.ಆರ್ಥಿಕವಾಗಿ ತುಂಬಾ ಹಿಂದುಳಿದ ವರ್ಗಕ್ಕೆ ಸೇರಿದ ಈ ಕುಟುಂಬಕ್ಕೆ ಇವಾಗ ಈ ಯೋಜನೆ ಮೃತ ವ್ಯಕ್ತಿಯ ಕುಟುಂಬದ ಕೈ ಹಿಡಿದಿದೆ.
ಬ್ಯಾಂಕ್ ಖಾತೆ ಹೊಂದಿದ ಪ್ರತಿಯೊಬ್ಬ ಗ್ರಾಹಕರು ಇಂತಹ ಸೌಲಭ್ಯಗಳನ್ನು ಪಡೆಯಲು ತರುಣ ಜೋಶಿ ಹೇಳಿದರು.
ಕಾರ್ಯಕ್ರಮದಲ್ಲಿ ಸೊನ್ನ ಗ್ರಾಮದ ಸಿ. ಎಸ್. ಪಿ ಅಶೋಕ ಬಿರಾದಾರ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಪ್ಪ ಗುಬ್ಯಾಡ, ಸದಸ್ಯರಾದ ವೀರಭದ್ರಯ್ಯ ಹಿರೇಮಠ, ಗ್ರಾಮಸ್ಥರಾದ ನಿಂಗಯ್ಯ ಗುತ್ತೇದಾರ, ಶರಣಬಸಪ್ಪ ಮನೂರ. ಬಸವರಾಜ ಸಲಗರ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.