ಜೇವರ್ಗಿ; ಕಾರ್ಮಿಕ ಇಲಾಖೆಯಿಂದ ದುಡಿಯುವ ಹಾಗೂ ಅಸಂಘಟಿತ ಕಾರ್ಮಿಕರಿಗಾಗಿ ಆಹಾರಧಾನ್ಯದ ಕಿಟ್ಟು ಗಳನ್ನು ವಿತರಿಸಲು ಮುಂದಾಗಿದ್ದು ಕಾರ್ಮಿಕರು ಕಾದು ಕಾದು ಸುಸ್ತಾದ ಪ್ರಸಂಗ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಾವಿದ್ಯಾಲಯದ ಆವರಣದಲ್ಲಿ ನಡೆದಿದೆ.
ಬೆಳಿಗ್ಗೆ 9:00 ಗಂಟೆಯಿಂದ ಕಾರ್ಮಿಕರು ಆಟೋ ಚಾಲಕರು ಹಾಗೂ ಮಹಿಳೆಯರು ಜಮಾಯಿಸಿದ್ದು 3 ಗಂಟೆಯವರೆಗೂ ಶಾಸಕರು ಬರದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಬೆಳಗ್ಗಿಂದ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಇಲ್ಲಗೆ ಬಂದಿರುವ ಜನರು ಶಾಸಕರಾದ ಡಾ.ಅಜೆಸಿಂಗ್ ಅವರ ಬರುವಿಕೆಯನ್ನು ನಿರೀಕ್ಷಿಸುವಂತ ಸ್ಥಿತಿ ನಿರ್ಮಾಣವಾಗಿತ್ತು ಎಂದು ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದರು.