ಆಳಂದ:ತಾಲೂಕಿನ ನಿಂಬರ್ಗಾ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರ.ಕಾರ್ಯದರ್ಶಿ ಮಲ್ಲಿನಾಥ ನಾಟೀಕಾರ ಅವರ ೨೫ನೇ ವರ್ಷದ ಜನ್ಮದಿನದ ನಿಮಿತ್ತ ನಿಂಬರ್ಗಾ ಗ್ರಾಮದ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ೨೫ ಸಸಿ ನೆಟ್ಟು ಸರಳವಾಗಿ ಜನ್ಮದಿನ ಆಚರಿಸಲಾಯಿತು. ಕೇಕ್ ಹಾಗೂ ಪಟಾಕಿ ಸಿಡಿಸಿ ಜನ್ಮದಿನ ಆಚರಿಸುವ ಬದಲು ಪರಿಸರ ಕಾಳಜಿಯೊಂದಿಗೆ ಸಸಿ ನೆಟ್ಟು ಜನ್ಮದಿನ ಆಚರಿಸಿ ಇನ್ನಿತರರಿಗೂ ಪ್ರೇರಣೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ನಿಂಬರ್ಗಾ ವಲಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ಮಾತನಾಡಿ, ಜನ್ಮದಿನಕ್ಕೆ ದುಂದು ವೆಚ್ಚ ಮಾಡದೇ ಸಸಿ ವಿತರಣೆ, ಅಥವಾ ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದರೆ ತುಂಬಾ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಂಡಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಈ ಸಂಧರ್ಭದಲ್ಲಿ ಮಲ್ಲಿನಾಥ ನಾಗಶೆಟ್ಟಿ, ಈರಪ್ಪ ನಂದಿ, ಲಕ್ಷ್ಮಿಕಾಂತ ದುಗೊಂಡ, ರಾಜು ಮಠಪತಿ, ಈರಣ್ಣ ಮಠಪತಿ, ಹಣಮಂತ ಹೂಗಾರ, ಶ್ರೀಶೈಲ್ ನಿಗಶೆಟ್ಟಿ, ಸಚಿನ ಶೀಲವಂತ, ರಾಕೇಶ ಬೀರಾದಾರ, ಅನೀಲ ನಾಗೂರ, ಮಡಿವಾಳಪ್ಪ ಮಡಿವಾಳ, ಶರಣು ಹಳಿಮನಿ, ಸಿದ್ದಾರಾಮ ಬಣಗಾರ, ಕ್ಷೇಮಲಿಂಗ ಕಂಭಾರ, ಈರಣ್ಣ ಶರಣ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.