ಕಲಬುರಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ನವೋದಯ ಮಾದರಿ ವಸತಿ ಶಾಲೆಗಳಲ್ಲಿ 2021-22ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ (ಆಂಗ್ಲ ಮಾಧ್ಯಮ) 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಹಾಗೂ ಪಾರ್ಸಿ ವಿದ್ಯಾರ್ಥಿಗಳಿಗೆ ಶೇ. 75 ರಷ್ಟು ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶೇ. 25 ರಷ್ಟು ಸ್ಥಾನಗಳು ಮೀಸಲಿಡಲಾಗಿದೆ. ಅದೇ ರೀತಿ ಬಾಲಕಿಯರಿಗೆ ಶೇ. 50 ರಷ್ಟು ಸ್ಥಾನಗಳು ಮೀಸಲಿಡಲಾಗಿದೆ.
ಮೊರಾರ್ಜಿ ದೇಸಾಯಿ ವಸತಿ ಶಾಲೆ ಫಿಲ್ಟರ್ ಬೆಡ್ (ಹಾಗರಗಾ) ಕಲಬುರಗಿ , ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆ ಸಾವಳಗಿ, ನವೋದಯ ಮಾದರಿ ವಸತಿ ಶಾಲೆ ಕಲಬುರಗಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಜೇವರ್ಗಿ ತಾಲೂಕಿನ ಯಾಳವಾರ ಮತ್ತು ಜೇವರ್ಗಿ, ಚಿತ್ತಾಪುರ ತಾಲೂಕಿನ ದಂಡೋತಿ ಮತ್ತು ರಾವೂರ್, ಆಳಂದ, ಅಫಜಲಪೂರ್, ಸೇಡಂ ತಾಲೂಕಿನ ಕೋಡ್ಲಾ ಹಾಗೂ ಚಿಂಚೋಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.
ಇಚ್ಚೆಯುಳ್ಳ ಅಭ್ಯರ್ಥಿಗಳು 2021ರ ಆಗಸ್ಟ್ 20 ರೊಳಗಾಗಿ www.deptofminkalaburagi.com ವೆಬ್‍ಸೈಟ್‍ದಲ್ಲಿ ಅಥವಾ ಸಂಬಂಧಪಟ್ಟ ವಸತಿ ಶಾಲೆಗಳಲ್ಲಿ ಮತ್ತು ತಾಲೂಕು ಮಾಹಿತಿ ಕೇಂದ್ರಗಳಲ್ಲಿ ಉಚಿತವಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯೊಂದಿಗೆ 5ನೇ ತರಗತಿಯ ಅಂಕಪಟ್ಟಿ, ಜಾತಿ ಆದಾಯ ಪ್ರಮಾಣ ಪತ್ರ, ಎರಡು ಪಾಸ್‍ಪೋರ್ಟ್ ಅಳತೆಯ ಛಾಯಾ ಚಿತ್ರಗಳು ಹಾಗೂ ಆಧಾರ ಕಾಡ್ರ್À/ ಬ್ಯಾಂಕ್ ಪಾಸಬುಕ್ ಝರಾಕ್ಸ್ ಪ್ರತಿ ಲಗತ್ತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಸತಿ ನಿಲಯಗಳ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳ ವಿವರ ಇಂತಿದೆ. ಫೀಲ್ಟರ್ ಬೆಡ್ (ಹಾಗರಗಾ) ಕಲಬುರಗಿ-9535440856, 7624968475, ಸಾವಳಗಿ-ಮೊಬೈಲ್ ಸಂಖ್ಯೆ 9886520797, ಕಲಬುರಗಿ-ಮೊಬೈಲ್ ಸಂಖ್ಯೆ 9902906266, ಯಾಳವಾರ-ಮೊಬೈಲ್ ಸಂಖ್ಯೆ 9449311924, ಜೇವರ್ಗಿ-ಮೊಬೈಲ್ ಸಂಖ್ಯೆ 8971438568, ದಂಡೋತಿ-ಮೊಬೈಲ್ ಸಂಖ್ಯೆ 9900393001, ರಾವೂರ್-ಮೊಬೈಲ್ ಸಂಖ್ಯೆ 7090017545, 8722326201, ಆಳಂದ-ಮೊಬೈಲ್ ಸಂಖ್ಯೆ 9342655073, ಅಫಜಲಪೂರ-ಮೊಬೈಲ್ ಸಂಖ್ಯೆ 9108206554, ಕೋಡ್ಲಾ-ಮೊಬೈಲ್ ಸಂಖ್ಯೆ 9886497962, ಚಿಂಚೋಳಿ-ಮೊಬೈಲ್ ಸಂಖ್ಯೆ 7090017545, 8722326201ಗೆ ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿ.ಡಿ.ಎ ಕಚೇರಿ, ಮೊದಲನೇ ಮಹಡಿ ಸ್ಟೇಷನ್ ರೋಡ ಕಲಬುರಗಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ.08472-247260ಗೆ ಸಂಪರ್ಕಿಸಲು ಕೋರಲಾಗಿದೆ.