ಕಲಬುರಗಿ: ಕೃಷಿ ಇಲಾಖೆ ವತಿಯಿಂದ 2021-22ನೇ ಸಾಲಿನಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಸಭೆಯನ್ನು ಇತ್ತೀಚೆಗೆ ಕಲಬುರಗಿ ತಾಲೂಕಿನ ಅವರಾದ (ಬಿ) ರೈತ ಸಂಪರ್ಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಕಲಬುರಗಿ ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಅವರು ಹವಾಮಾನ ಮಾಹಿತಿ, ಬೆಳೆ ಸಮೀಕ್ಷೆ, ಕೃಷಿ ಇಲಾಖೆಯ ಯೋಜನೆಗಳು ಮತ್ತು ಬೆಳೆ ವಿಮಾ ಯೋಜನೆ ಬಗ್ಗೆ ಮಾಹಿತಿ ನೀಡಿ ರೈತರು ಬೆಳೆ ವಿಮೆ ಮಾಡಿಸಬೇಕೆಂದು ರೈತರಲ್ಲಿ ವಿನಂತಿಸಿಕೊಂಡರು.
ಇದೇ ಸಂದರ್ಭದಲ್ಲಿ ಭಾರತಿಯ ಕೃಷಿ ಸಂಶೋಧನಾ ಪರಿಷತ್ತು ನೀಡುವ ಜಗಜೀವನ ರಾಮ ಅಭಿನವ ಕಿಸಾನ ಪುರಸ್ಕರ ಪ್ರಶ್ತಸಿಗೆ ಆಯ್ಕೆಯಾದ ಕಲಬುರಗಿ ತಾಲೂಕಿನ ಹಾಳಸುಲ್ತಾನಪುರ ಗ್ರಾಮದ ಶರಣಬಸಪ್ಪ ಪಾಟೀಲ್ ಇವರನ್ನು ಕಲಬುರಗಿ ತಾಲೂಕು ಕೃಷಿ ಇಲಾಖೆಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಶರಣಬಸಪ್ಪ ಪಾಟೀಲ್ ಅವರು ತಮ್ಮ ಕ್ಷೇತ್ರದಲ್ಲಿ ಅಳವಡಿಸಿರುವ ನೂತನ ತಾಂತ್ರಿಕತೆಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಕೃಷಿ ವಿಜ್ಞಾನಿ ಅಮೃತ ಜಿ, ಕೃಷಿ ಅಧಿಕಾರಿ ನೀಲಕಂಠ ಎಂ, ರಾಣಪ್ಪ ಕುಮಸಿ, ಸಹಾಯಕ ಕೃಷಿ ಅಧಿಕಾರಿ ಮಲ್ಲಿಕಾರ್ಜುನ, ಬಸವರಾಜ ಡಿ ಪಾಟೀಲ್, ರಾಜೇಂದ್ರ ಸಹಾಯಕ ತೊಟಗಾರಿಕೆ ಅಧಿಕಾರಿ ಬಸವರಾಜ ಹಾಗೂ ವಿವಿಧ ಗ್ರಾಮದ ರೈತರು ಉಪಸ್ಥಿತರಿದ್ದರು.