ಸುರಪುರ: ಇಲ್ಲಿಯ ಪೊಲೀಸ್ ಠಾಣೆಗೆ ನೂತನ ಪೊಲೀಸ್ ಇನ್ಸ್ಪೇಕ್ಟರಾಗಿ ಆಗಮಿಸಿರುವ ಸುನಿಲ್ ಮೂಲಿಮನಿಯವರಿಗೆ ಶುಕ್ರವಾರ ಸಂಜೆ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ವತಿಯಿಂದ ಸನ್ಮಾನಿಸಿ ಕರ್ತವ್ಯಕ್ಕೆ ಶುಭ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿಐ ಸುನಿಲ್ ಮೂಲಿಮನಿ,ಪತ್ರಕರ್ತರಿಗೂ ಸಮಾಜದ ಏಳಿಗೆಯ ಕುರಿತು ಪೊಲೀಸರಷ್ಟೆ ಜವಬ್ದಾರಿ ಇದೆ.ಎಲ್ಲರು ಸೇರಿ ಉತ್ತಮ ಸಮಾಜ ನಿರ್ಮಾಣ ಹಾಗು ಕಾನೂನು ಸುವ್ಯವಸ್ಥೆಯನ್ನು ಜನರು ಪಾಲಿಸುವಂತೆ ಅರಿವು ಮೂಡಿಸುವ ಕೆಲಸ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ,ಉಪಾಧ್ಯಕ್ಷ ಮಲ್ಲು ಗುಳಗಿ,ಪ್ರಧಾನ ಕಾರ್ಯದರ್ಶಿ ಪರಶುರಾಮ ಮಲ್ಲಿಬಾವಿ,ಖಜಾಂಚಿ ಮಹಾದೇವಪ್ಪ ಬೊಮ್ಮನಹಳ್ಳಿ,ಹಿರಿಯ ಪತ್ರಕರ್ತ ಧೀರೇಂದ್ರ ಕುಲಕರ್ಣಿ,ಮುರಳಿಧರ ಅಂಬುರೆ,ಮನಮೋಹನ ದೇವಾಪುರ,ಶ್ರೀಮಂತ ಚಲುವಾದಿ ಸೇರಿದಂತೆ ಅನೇಕರಿದ್ದರು.
ಯುವ ವೇದಿಕೆ ಸನ್ಮಾನ: ಪೊಲೀಸ್ ಇನ್ಸ್ಪೇಕ್ಟರ್ ಸುನಿಲ ಮೂಲಿಮನಿಯವರಿಗೆ ಶನಿವಾರ ಬೆಳಿಗ್ಗೆ ವೀರಶೈವ ಲಿಂಗಾಯತ ಯುವ ವೇದಿಕೆ ಹಾಗು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಸನ್ಮಾನಿಸಿ ಕರ್ತವ್ಯಕ್ಕೆ ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಯುವ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಡೊಣೂರ,ತಾಲೂಕು ಅಧ್ಯಕ್ಷ ವಿರೇಶ ಪಂಚಾಂಗಮಠ,ಮಹಾಸಭಾ ಉಪಾಧ್ಯಕ್ಷ ಸಿದ್ದನಗೌಡ ಹೆಬ್ಬಾಳ,ಶರಣು ಕಳ್ಳಿಮನಿ,ರವಿಗೌಡ ಯಮನೂರ,ಮಲ್ಲು ಬಾದ್ಯಾಪುರ,ವಿಶ್ವ ಜಾಲಹಳ್ಳಿ ಸೇರಿದಂತೆ ಅನೇಕರಿದ್ದರು.
ಅದೇರೀತಿಯಾಗಿ ಪಿಐ ಸುನಿಲಕುಮಾರ ಮೂಲಿಮನಿಯವರಿಗೆ ತಾಲೂಕು ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರಾದ ಗಂಗಾಧರ ನಾಯಕ ತಿಂಥಣಿ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಉಸ್ತುವಾರಿ ಸಮಿತಿ ಯಾದಗಿರಿ ಜಿಲ್ಲೆಯ ನಿರ್ದೇಶಕರಾದ ರಮೇಶ ದೊರೆ ಆಲ್ದಾಳ,ಎಸ್.ಸಿ,ಎಸ್ಟಿ ಭವನಗಳ ನಿರ್ವಹಣಾ ಸಮಿತಿ ನಿರ್ದೇಶಕರಾದ ವೆಂಕಟೇಶ ಬೇಟೆಗಾರ ಮತ್ತಿತರರು ಸನ್ಮಾನಿಸಿ ಸ್ವಾಗತಿಸಿದರು.