ಹೆರಿಗೆ ಕೇಂದ್ರದಲ್ಲಿ ಚಿಕಿತ್ಸೆ ಪ್ರಾರಂಭಕ್ಕೆ ಡಿಎಚ್ಓಗೆ ಮನವಿ

0
63

ಕಲಬುರಗಿ: ನಗರ ನ್ಯೂ ರಹಿಮತ್ ನಗರ ಬಡಾವಣೆ ಪ್ರಥಾಮಿಕ ಆರೋಗ್ಯ ಕೇಂದ್ರದ ಹೆರಿಗೆ ಕೇಂದ್ರದಲ್ಲಿ ಚಿಕಿತ್ಸೆ ಪ್ರಾರಂಭಿಸಬೇಕೆಂದು ಫಿರದೋಸ್ ಕಾಲೋನಿ ವೇಲ್ಫರ್ ಸೂಸೈಟಿಯಿಂದ ಜಿಲ್ಲಾ ಆರೋಗ್ಯ ಅಧಿಕಾರಿ ಶರಣಬಸಪ್ಪ ಎನ್. ಗಾಣಜಲಖೇಡ್ ಅವರಿಗೆ ಮನವಿ ಪತ್ರ ನೀಡಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ದಸ್ತೇಗಿರ್ ಅಹ್ಮದ್ ಮಾತನಾಡಿ 2016 ಸದರಿ ಪ್ರಥಾಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಚಿಕಿತ್ಸೆಗಾಗಿ ಕೋಣೆಗಳು ನಿರ್ಮಿಸಿ 5 ವರ್ಷ ಕಳೆದರು ಹೆರಿಗೆ ಕೇಂದ್ರದಲ್ಲಿ ಚಿಕಿತ್ಸೆ ಆರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಹೆರಿಗೆ ಚಿಕಿತ್ಸೆ ಮತ್ತು ಪರೀಕ್ಷೆಗಳು ಕೇಂದ್ರದಲ್ಲಿ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸೊಸೈಟಿ ಕಾರ್ಯದರ್ಶಿ ಮೊಹಮ್ಮದ್ ಅಜರೊದ್ದೀನ್, ಯುವ ಜಾಗೃತಿ ವೇದಿಕೆಯ ಸಾಜಿದ್ ಅಲಿ, ಅಬ್ದುಲ್ ಮಜೀದ್, ಅನ್ವರ್, ಮಿರ್ಜಾ ಗಯಾಜ್ ಬೇಗ್, ಮೊಹಮ್ಮದ್ ಇಮ್ರಾನ್ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here