ಕಲಬುರಗಿ: ಗೋದುತಾಯಿ ನಗರ ಅಭಿವೃದ್ಧಿ ಸಂಘ ನಗರದ ಶಿವಮಂದಿರದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಲಿಂಗರಾಜಪ್ಪ ಅಪ್ಪ ಮಾತನಾಡಿ ಮುಂದಿನ ಕಾರ್ಗಿಲ್ ವಿಜಯೋತ್ಸವದೋಳಗಾಗಿ ಗೋದುತಾಯಿ ನಗರದಲ್ಲಿ ಜಾಗ ನೀಡಿ ಯುದ್ಧ ಸ್ಮಾರಕ ನಿರ್ಮಿಸಲಾಗುವುದು ಎಂದು ಹೇಳಿದರು.
ಯುದ್ಧ ಸ್ಮಾರಕ ನಿರ್ಮಾಣದಿಂದ ಈ ಭಾಗದ ಯುವಕರಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಮನೋಭಾವನೆ ಹುಟ್ಟುತ್ತದೆ ಅಲ್ಲದೆ ಸೈನಿಕರನ್ನು ಗೌರವಿಸಿದಂತೆ ಆಗುತ್ತದೆ ಗಡಿಯಲ್ಲಿ ದೇಶ ಕಾಯುವ ಮೂಲಕ ನಮಗೆ ರಕ್ಷಣೆ ನೀಡುವ ಸೈನಿಕರನ್ನು ಗೌರವಿಸುವ ಉದ್ದೇಶದಿಂದ ಯುದ್ಧ ಸ್ಮಾರಕ ನಿರ್ಮಾಣ ಮಾಡಲಾಗುವುದು ಈ ಕುರಿತು ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಸರಕಾರದಿಂದ ಪರವಾನಿಗೆ ಸಿಕ್ಕ ನಂತರ ಕಾಮಗಾರಿ ಆರಂಭಿಸಲಾಗುವುದು ಮುಂದಿನ ವರ್ಷದ ಕಾರ್ಗಿಲ್ ವಿಜಯೋತ್ಸವ ಸ್ಮಾರಕದಲ್ಲಿ ಆಚರಿಸುವಂತಾಗಲಿ ಎಂದು ಹೇಳಿದರು.
ಮಾಜಿ ಸೈನಿಕ ಮಲ್ಲಿಕಾರ್ಜುನ ಮಡಿವಾಳ ಮಾತನಾಡಿ ಬಳ್ಳಾರಿ ಹೊರತುಪಡಿಸಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಎಲ್ಲು ಯುದ್ದ ಸ್ಮಾರಕ ಇಲ್ಲ ಲಿಂಗರಾಜಪ್ಪ ಅಫ್ಪಅವರು ತಮ್ಮ ಖರ್ಚಿನಲ್ಲಿ ನಿರ್ಮಿಸಿ ಕೊಡಲು ತೀರ್ಮಾನಿಸಿದ್ದ ಕ್ಕೆ ಮಾಜಿ ಸೈನಿಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ವೀರಶೈವ ಸಮಾಜದ ಯುುವ ಮುಖಂಡರಾದ ಎಂ ಎಸ್ ಪಾಟೀಲ್ ನರಿಬೋಳ, ಗೋದುತಾಯಿ ನಗರದ ಪ್ರಮುಖರಾದ ಚಂದ್ರಶೇಖರ್ ಶಿಲವಂತ್, ಮಲ್ಲಿಕಾರ್ಜುನ್ ಪಾಟೀಲ್, ತಾತ ಗೌಡ ಪಾಟೀಲ್, ಮಾಾಲಕಣಿ, ಮಾಲಾ ಡೋಣ್ಣುರ್, ಮಾಜಿ ಸೈನಿಕರಾದ ಕೃಷ್ಣ ಅಶೋಕ್, ಕುಲಕರ್ಣಿ ಗೌರ, ಶ್ರೀನಿವಾಸ್ ಪವರ್, ರಾಮಪ್ಪ, ಶಿವಪುತ್ರ, ಶರಣಪ್ಪ, ಶಿವಶಂಕರ್ ಪಾಟೀಲ್, ಅಪ್ಪರಾವ್ ಪಾಟೀಲ್ ಸೇರಿದಂತೆ ಇತರರು ಇದ್ದರು.