ಆಳಂದ: ಪಟ್ಟಣದ ಗುರುಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ನೂತನ ಕಚೇರಿಯನ್ನ ಸಂಘದ ಜಿಲ್ಲಾ ಅಧ್ಯಕ್ಷ ಭವಾನಿಸಿಂಗ ಠಾಕೂರ ಅವರು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಠಾಕೂರ ಅವರು, ಜಿಲ್ಲೆಯಲ್ಲೇ ಪತ್ರಿಕಾ ಕಚೇರಿ ಆರಂಭಿಸುವ ಮೂಲಕ ಬೃಹತ ಪತ್ರಿಕಾ ದಿನಾಚರಣೆ, ಹಿರಿಯ ಪತ್ರಕರ್ತರಿಗೆ ಸನ್ಮಾನ ಸಮಾರಂಭ ಆಚರಿಸುವ ಮೂಲಕ ಮಾದರಿಯ ಕಾರ್ಯವನ್ನು ಮಾಡಿದ ಆಳಂದ ಮೊದಲು ಸಂಘವಾಗಿದೆ ಎಂದರು.
ಈ ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಸಮಾಜ ಕಲ್ಯಾಣಾಧಿಕಾರಿ ಮೊನಮ್ಮ ಸುತಾರ, ರೈತ ಸಂಘದ ಅಧ್ಯಕ್ಷ ನಾಗೇಂದ್ರ ತಂಬೆ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿದ್ಧರಾಮ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುನಾಥ ಭಾವಿ, ಪ್ರಧಾನ ಕಾರ್ಯದರ್ಶಿ ನರಸಪ್ಪ ಬಿರಾದಾರ, ಕಲ್ಯಾಣಪ್ಪ ಬಿಜ್ಜರಗಿ, ಬಿ.ಆರ್.ಸಿ. ಪ್ರಕಾಶ, ಅಣ್ಣಾರಾಯ ಮಂಗಾಣೆ, ಮಲ್ಲಿಕಾರ್ಜುನ ಮಲ್ಲಶೆಟ್ಟಿ, ಮನ್ಸೂರ ಮುಜಾವರ ಆಗಮಿಸಿದ್ದರು. ಸಂಘದ ಅಧ್ಯಕ್ಷ ಮಹಾದೇವ ವಡಗಾಂವ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ, ರಾಜು ದೇಶಮುಖ, ಪತ್ರಕರ್ತ ಸಂಜಯ ಪಾಟೀಲ, ಡಿ.ಎಂ. ಪಾಟೀಲ, ಶಾಂತಪ್ಪ ಕೋರೆ, ಜಗದೀಶ ನಿರಗುಡಿ ಉಪಸ್ಥಿತರಿದ್ದರು.