ಸುಬೇದಾರ ರಾಮಜಿ ಸಕ್ಪಾಲ್ ಸೇರಿದಂತೆ ಎಂಟು ಕೃತಿಗಳಿಗೆ ಡಾ. ಪಂ.ಪುಟ್ಟರಾಜ್ ಸಾಹಿತ್ಯ ಪ್ರಶಸ್ತಿ

0
93

ಕಲಬುರಗಿ: ಗದಗನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಾಹಿತ್ಯದ ವಿವಿದ ಪ್ರಕಾರಗಳಲ್ಲಿ ಕೊಡಮಾಡುವ ರಾಜ್ಯಮಟ್ಟದ ಪಂ. ಪುಟ್ಟರಾಜ ಸಾಹಿತ್ಯ ಪುರಸ್ಕಾರಕ್ಕೆ ಒಟ್ಟು ಎಂಟು ಕೃತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಪಂ. ಪುಟ್ಟರಾಜ ಸೇವಾ ಸಮಿತಿಯ ಗೌರವಾಧ್ಯಕ್ಷ ಶ್ರೀ ಚನ್ನಬಸವ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಡಾ.ರಮೇಶ ಕತ್ತಿಯವರ ಕತ್ತಿಯ ಅಲಗು ಕೃತಿ ವಿಶೇಷ ಪ್ರಶಸ್ತಿ ಗಳಿಸಿದೆ. ಇದರ ಜೊತೆಗೆ ವರ್ಷದ ಶ್ರೇಷ್ಟ ಪುಸ್ತಕ ಪ್ರಶಸ್ತಿಗೆ ವಿದ್ಯಾಧರ ದೇಸಾಯಿಯ ಹಿಮ್ಮುಖ ಹರಿದ ನದಿ(ಕಥಾಸಂಕಲನ), ಸಿಂಧುಚಂದ್ರ ಹೆಗಡೆಯ ಸೂಜುಮೆಣಸು ಕೆಸುವಿನೆಲೆ(ಕವನಸಂಕಲನ), ಪತ್ರಕರ್ತ ಪ್ರಭುಲಿಂಗ ನೀಲೂರೆಯವರ ಸುಬೇದಾರ ರಾಮಜಿ ಸಕ್ಪಾಲ್(ಜೀವನ ಚರಿತ್ರೆ), ಆರ್‌ಜಿಪೈ ಮಂಜೈನ್ ಅವರ ಓದಿ ಇನ್ನೊಮ್ಮೆ ಓದಿ ಪ್ಲೀಸ್(ವ್ಯಕ್ತಿತ್ವವಿಕಸನ), ಸಾತುಗೌಡರ ಪುಟ್ಟಿ ಮತ್ತು ಕನ್ನಡಿ(ಮಕ್ಕಳ ಸಾಹಿತ್ಯ), ಸಿದ್ದಲಿಂಗಯ್ಯ ಕುಲಕರ್ಣಿಯವರ ಷಟ್‌ಸ್ಥಲ್ ಚಕ್ರವರ್ತಿ ಚೆನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳವಿಗೆ(ಸಂಶೋಧನಾ ಕೃತಿ) ಹಾಗೂ ಭಾಗ್ಯವತಿ ಕೆಂಭಾವಿಯವರ ಒಲವಿನ ಮಧುಬಟ್ಟಲು(ಗಜಲ್‌ಗಳು) ಕೃತಿಗಳು ಪ್ರಶಸ್ತಿಗೆ ಭಾಜನವಾಗಿವೆ.

Contact Your\'s Advertisement; 9902492681

ಸಪ್ಟೆಂಬರ್ ತಿಂಗಳಲ್ಲಿ ಗದಗನಲ್ಲಿ ನಡೆಯಲಿರುವ ಡಾ. ಪಂ.ಪುಟ್ಟರಾಜ ಸಾಹಿತ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮಹಾಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here