ಪತ್ರಿಕಾ ಭವನ ನಿರ್ಮಾಣಕ್ಕೆ ಲಕ್ಷ ರೂ ಸಹಾಯಧನ

0
26

ಆಳಂದ: ಕಲ್ಯಾಣ ಕರ್ನಾಕಟ ಪ್ರದೇಶದ ಸಾಧನೆಗಳು ಮತ್ತು ಸಮಸ್ಯೆಗಳ ಮೇಲೆ ಸರ್ಕಾರದ ಗಮನಕ್ಕೆ ತಂದು ಅಭಿವೃದ್ಧಿ ಪಥದತ್ತ ಸಾಗುವ ನಿಟ್ಟಿನಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಜಿಡಗಾ ಮಠದಲ್ಲೇ ಮುಂದಾದರೆ ಶ್ರೀಮಠವು ಎಲ್ಲ ರೀತಿಯಿಂದಲೂ ಸಂಪೂರ್ಣವಾಗಿ ಸಹಕಾರ ನೀಡಲಿದೆ ಎಂದು ಜಿಡಗಾ, ಮುಗಳಖೋಡ ಮತ್ತು ಕೊಟನೂರ ಮಠದ ಪೀಠಾಧಿಪತಿ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಸುಕ್ಷೇತ್ರ ಜಿಡಗಾ ಗ್ರಾಮದಲ್ಲಿನ ಷಡಕ್ಷರಿ ಶಿವಯೋಗಿ ಸಿದ್ಧರಾಮೇಶ್ವರ ಅನುಭಾವ ಆಶ್ರಮದ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರು ಸಂಘ ತಾಲೂಕು ಘಟಕ ಹಾಗೂ ಶ್ರೀಮಠದ ಆಶ್ರಯದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಹಾಗೂ ಇದೇ ವೇಳೆ ಜಿಲ್ಲಾ ಹಿರಿಯ ಪತ್ರಕರ್ತರಿಗೆ ಸನ್ಮಾನಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ತುಮಕೂರಿನ ಸಿದ್ಧಗಂಗಾ ಮಠ ಹಾಗೂ ಸುತ್ತೂರಿನ ಮಠಗಳ ಮಾದರಿಯಲ್ಲೂ ಈ ಭಾಗದಲ್ಲಿ ಜಿಡಗಾ ಮಠವು ಸಾವಿರ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ಶಾಲೆ ಹೀಗೆ ಹಲವು ಜನಪರ ಕಾರ್ಯಗಳನ್ನುಕೈಗೆತ್ತಿಕೊಂಡಿದೆ. ಆದರೆ ಆ ಭಾಗದ ಮಠಗಳಿಗೆ ಸಿಕ್ಕ ಪ್ರಚಾರ ಈ ಭಾಗದ ಸಾಧನೆ ಮಾಡಿದ ಮಠಗಳ ಪ್ರಚಾರಕ್ಕೆ ಮನಣೆ ದೊರೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಪತ್ರಕರ್ತರು ಸಾಧನೆಗಳು ಬಿತ್ತರಿಸುವು ಜೊತೆಗೆ ಇಲ್ಲಿನ ಜನರ ಸಮಸ್ಯೆಗಳ ನಿವಾರಣೆಗೆ ಸರ್ಕಾರದ ಕಣ್ಣು ತೆರೆಸುವ ಕಾರ್ಯವನ್ನು ಮಾಡಬೇಕು. ಪತ್ರಕರ್ತರ ಸಂಕಷ್ಟದ ಜೀವನವಿದೆ, ನಿಮ್ಮ ಸಮಾಜಮುಖಿ ಕಾರ್ಯಕ್ಕೆ ಶ್ರೀಮಠವು ಸದಾ ಬೆನ್ನೆಲುಬಾಗಿ ನಿಂತುಕೊಳ್ಳುತ್ತದೆ. ಶೀಘ್ರವೇ ಕಲಬುರಗಿಯ ಕೊಟನೂರ ಮಠದಲ್ಲಿ ಜಿಲ್ಲೆಯ ಮಾಧ್ಯಮದವರನ್ನು ಗುರುತಿಸುವ ಬೃಹತ್ ಕಾರ್ಯವನ್ನು ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.

ಆಳಂದನಲ್ಲಿ ಪತ್ರಿಕಾ ಭವನ ನಿರ್ಮಾಣಗೊಳ್ಳಬೇಕು. ಇದಕ್ಕೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಹಕಾರಿಸಿ ಕಟ್ಟಡಕ್ಕೆ ಮುಂದಾಗಬೇಕು. ಜಿಡಗಾ ಶ್ರೀಮಠದಿಂದಲೂ ೧ ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು ಎಂದು ಅವರು ಘೋಷಸಿದರು. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ, ಕೋವಿಡ್-೧೯ ನಿರ್ವಾಹಣೆ, ಲಾಕ್‌ಡೌನ್ ಹೀಗೆ ಹತ್ತು ಹಲವಾರು ರೀತಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ದುಡಿಯುವ ಪತ್ರಕರ್ತರು ಜೀವಪರ ಜನಪರವಾಗಿ ನಿಸ್ವಾರ್ಥವಾಗಿ ದೊಡ್ಡ ಕಾರ್ಯವನ್ನು ನಿರ್ವಹಿಸಿದ್ದಾರೆ. ಜಿಡಗಾ ಪುಣ್ಯಕ್ಷೇತ್ರದಲ್ಲಿ ಸನ್ಮಾನಿತ ಪತ್ರಕರ್ತರ ಭವಿಷ್ಯ ಉಜ್ವಲಗೊಳ್ಳಲಿ ಎಂದು ಶ್ರೀಗಳು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಭವಾನಿಸಿಂಗ ಠಾಕೂರ ಅವರು ಮಾತನಾಡಿ, ಮಾಧ್ಯಮ ಕ್ಷೇತ್ರವಿಂದು ಸಂಕಷ್ಟದ ಕಾಲಗಟ್ಟದಲ್ಲಿ ನಿಂತುಕೊಂಡ ಮೇಲೆ ಪತ್ರಕರ್ತರ ಬದುಕು ಸಂಕಷ್ಟಮಯವಾಗಿದೆ. ರಾಜ್ಯ ಸಂಘವು ಸಂಕಷ್ಟದಲ್ಲಿರುವ ಪತ್ರಕರ್ತರ ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಸಹಾಯ ಪಡೆದು ಒದಗಿಸುವ ಕಾರ್ಯವನ್ನು ಮಾಡುತ್ತಿದೆ. ಪತ್ರಕರ್ತರ ತಮ್ಮ ವೃತಿಯೊಂದಿಗೆ ಸಂಘಟಿತರಾಗಿ ಒಳ್ಳೆಯ ಕೆಲಸವನ್ನು ಮಾಡಬೇಕು ಎಂದರು.

ಸನ್ಮಾನ ಸ್ವೀಕರಿಸಿದ ಹಿರಿಯ ಪತ್ರಕರ್ತ ಶೇಷಮೂರ್ತಿ ಅವಧಾನಿ, ಸಂಪಾದಕ ಶಿವಲಿಂಗಪ್ಪ ದೊಡ್ಡಮನಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಅವಂಟಿ ಅವರು ಮಾಧ್ಯಮ ಸ್ಥಿತಿಗತಿ ಮತ್ತು ಗ್ರಾಮೀಣ ಪತ್ರಕರ್ತರ ಉದ್ದೇಶಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಮಹಾದೇವ ವಡಗಾಂವ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಿತಿಗತಿ ಮತ್ತು ಜನರ ಬೇಕು ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಮಾಧ್ಯಮದ ಕಾರ್ಯ ಅತ್ಯಂತ ಮಹತ್ವದಾಗಿದ್ದು, ಈ ನಿಟ್ಟಿನಲ್ಲಿ ಜಿಡಗಾ ಶ್ರೀಮಠದಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನಕ್ಕೆ ಜಿಲ್ಲಾ ಸಂಘವು ರಾಜ್ಯ ಸಂಘಕ್ಕೆ ಒತ್ತಾಯಿಸಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು. ಸ್ಥಾನಿಕ ಸಂಪಾದಕ, ಎಚ್. ಶೇಷಗಿರಿರಾವ್, ಕುಮಾರ ಬುರಡಿಕಟ್ಟೆ, ರಾಮಕೃಷ್ಣ ಬಡಶೇಷಿ, ಮನೋಜ್ ಗುದ್ದಿ, ಸುದ್ದಿವಾಹಿನಿಯ ಹಿರಿಯ ವರದಿಗಾರ ಶರಣಯ್ಯ ಹಿರೇಮಠ, ಸಂಜಯ ಚಿಕ್ಕಮಠ, ಓಂ. ಪ್ರಕಾಶ ಮುನ್ನೂರ, ಪುರುಷೋತ್ತಮ ಕುಲಕರ್ಣಿ, ಪ್ರವೀಡ ರೆಡ್ಡಿ, ಸಂಗಮೇಶ ಹಿರೇಮಠ ಮತ್ತಿತರಿಗೆ ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ, ತಾಪಂ ಇಒ ನಾಗಮೂರ್ತಿ ಕೆ. ಶೀಲವಂತ, ಗ್ರಾಪಂ ಅಧ್ಯಕ್ಷ ಸಿದ್ಧರಾಮ ಯಾದವಾಡ, ಅಭಿವೃದ್ಧಿ ಅಧಿಕಾರಿ ರಾಮದಾಸ್ ಪತ್ರಕರ್ತ ಸಂಘದ ರಾಜು ಎಂ. ದೇಶಮುಖ, ಮತ್ತಿತರು ಪಾಲ್ಗೊಂಡಿದ್ದರು. ಗ್ರೇಡ್-೨ ತಹಸೀಲ್ದಾರ ಬಸವರಾಜ ರಕ್ಕಸಗಿ, ಅಧಿಕಾರಿಗಳಾದ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಡಾ. ಸಂಜಯ ರೆಡ್ಡಿ, ಶರಣಗೌಡ ಪಾಟೀಲ, ಡಿ.ಬಿ. ಪಾಟೀಲ ಸಿ.ವೈ ವಿರೇಂದ್ರ, ತೋಟಗಾರಿಕೆ ಅಧಿಕಾರಿ ಶಂಕರಗೌಡ, ಶಾಂತಪ್ಪ ಕೋರೆ, ಜಗದೀಶ ನಿರಗುಡಿ, ವೀರಯ್ಯ ಸ್ವಾಮಿ ಉಪಸ್ಥಿತರಿದ್ದರು. ಪತ್ರಕರ್ತ ಡಿ.ಎಂ. ಪಾಟೀಲ ಸ್ವಾಗತಿಸಿದರು. ರಾಜು ಉದನೂರ ನಿರೂಪಿಸಿದರು. ಸೇಡಂ ಅಧ್ಯಕ್ಷ ಶಿವುಕುಮಾರ ನಿಡಗುಂದ ವಂದಿಸಿದರು. ಸಿದ್ಧ ಶ್ರೀ ಕಲಾಬಳಗದಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here