ಕುಡಿಯುವ ನೀರಿಗಾಗಿ ಹಣದ ಸಮಸ್ಯೆ ಇಲ್ಲ: ಸಚಿವ ದೇಶಪಾಂಡೆ

0
52

ಕಲಬುರಗಿ: ರಾಜ್ಯದಲ್ಲಿ ಕುಡಿಯುವ ನೀರಿಗಾಗಿ ಹಣದ ಕೊರತೆ ಇಲ್ಲ ಎಂದು ರಾಜ್ಯದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಹೇಳಿದರು.

ಬುಧವಾರ ಅಫಜಲಪೂರ್ ತಾಲ್ಲೂಕಿನ ಗೊಬ್ಬೂರ್(ಬಿ) ಗ್ರಾಮದಲ್ಲಿ ಟ್ಯಾಂಕರ್ ನೀರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಂಬಂಧ ಜಿಲ್ಲಾಧಿಕಾರಿಗಳ ಬಳಿ 600 ಕೋಟಿ ರೂ.ಗಳಿವೆ. ಕಲಬುರ್ಗಿ ಜಿಲ್ಲಾಧಿಕಾರಿಗಳ ಬಳಿ 12 ಕೋಟಿ ರೂ.ಗಳಿವೆ ಎಂದರು. ರಾಜ್ಯದಲ್ಲಿ ಹಲವೆಡೆ ಮಳೆಯಾದರೆ, ಇನ್ನೂ ಹಲವೆಡ ಮಳೆ ಆಗಿಲ್ಲ. ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಬೆಂಗಳೂರು, ಮೈಸೂರು, ಹಾಸನ್, ಮಂಡ್ಯ ಮುಂತಾದ ಜಿಲ್ಲೆಗಳಲ್ಲಿ ಮಳೆ ಆಗಿದೆ. ಅದಾಗ್ಯೂ, ಕಲಬುರ್ಗಿ, ಬೀದರ್, ಯಾದಗಿರಿ ಮುಂತಾದ ಜಿಲ್ಲೆಗಳಲ್ಲಿ ಮಳೆ ಆಗಿಲ್ಲ ಎಂದು ಅವರು ಹೇಳಿದರು.

Contact Your\'s Advertisement; 9902492681

ಬರ ಪರಿಸ್ಥಿತಿ ಜಿಲ್ಲೆಗಳಲ್ಲಿ ಕಂದಾಯ, ಕೃಷಿ, ಸಹಕಾರ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ ನೇತೃತ್ವದಲ್ಲಿ ನ ಸಚಿವ ಸಂಪುಟದ ಉಪ ಸಮಿತಿ ಪ್ರವಾಸ ಮಾಡುತ್ತಿವೆ. ನಾನು ಚುನಾವಣೆ ಆದ ನಂತರ ೨೦ ದಿನಗಳಲ್ಲಿ ೧೬ ಬರ ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವೆ. ಬರ ಪೀಡಿತ ಪ್ರದೇಶಗಳಲ್ಲಿ ಭೇಟಿ ವಿಳಂಬ ಆಗಿಲ್ಲ ಎಂದು ಅವರು ತಿಳಿಸಿದರು.
ಬರ ನಿರ್ವಹಣೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮೂರು ತಿಂಗಳವರೆಗೆ ಟ್ಯಾಂಕರ್ ನೀರು ಪೂರೈಸುವುದು, ಮೂರು ತಿಂಗಳವರೆಗೆ ಗೋಶಾಲೆ ಆರಂಭಿಸುವ ನಿರ್ಬಂಧಗಳನ್ನು ರಾಜ್ತ ಸರ್ಕಾರ ತೆಗೆದುಹಾಕಿ, ಸಮಸ್ಯೆ ನಿವಾರಣೆ ಗೆ ಆದ್ಯತೆ ಕೊಟ್ಟಿದೆ ಎಂದು ಅವರು ಹೇಳಿದರು.

ಟ್ಯಾಂಕರ್ ನೀರು ಪೂರಕೆಗೆ ಜಿಲ್ಲಾಧಿಕಾರಿಗಳಿಗೆ ಇದ್ದ ಅಧಿಕಾರವನ್ನು ತಹಶಿಲ್ದಾರ್ ಅವರಿಗೆ ಕೊಡಲಾಗಿದೆ. ಗೊಬ್ಬೂರ್(ಬಿ) ಗ್ರಾಮಕ್ಕೆ ಕುಡಿಯುವ ನೀರಿನ ಪೈಪಲೈನ್ ಕಾಮಗಾರಿಗೆ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮಳೆ, ಬೆಳೆ ಸರಿಯಾಗಿ ಆಗಲೆಂದು ದೇವಲ್ ಗಾಣಗಾಪೂರ್ ದತ್ತಾತ್ರೇಯ ದೇವಸ್ಥಾನಕರಕೆ ಹೋಗಿ ಪ್ರಾರ್ಥಿಸಿರುವೆ ಎಂದು ಅವರು ತಿಳಿಸಿದರು. ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಕಾ ಪಂಚಾಯತಿ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಸಿದ್ದು ಸಿರಸಗಿ, ಜಿಲ್ಲಾಧಿಕಾರಿ ವೆಂಕಟೇಶ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here