ಲೈರಿಗೆ ಬೈಕ್ ಡಿಕ್ಕಿ ಪೊಲೀಸ್ ಪೇದೆ ಸ್ಥಳದಲ್ಲೆ ಸಾವು

0
71

ಗದಗ: ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತ ಪೊಲೀಸ್ ಪೇದೆ ಯೊಬ್ಬರು ಸ್ಥಳದಲ್ಲೇ ಸಾವನಪವಪಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೊಸಡಂಬಳ ಬಳಿ ನಡೆದಿದೆ.

ಶಿವಪ್ರಕಾಶ ಲೂಟಿಮಠ (31) ಸ್ಥಳದಲ್ಲೆ ಮೃತಪಟ್ಟ ಪೊಲೀಸ್ ಪೇದೆ. ಶಿವಪ್ರಕಾಶ್ ಗದಗ ಇಂಟಲಿಜೆನ್ಸ್ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿಬಂದಿದ್ದು, ಗದಗದಿಂದ ಮುಂಡರಗಿಗೆ ಹೊರಟಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

Contact Your\'s Advertisement; 9902492681

ಹೊಸಡಂಬಳ ಬಳಿ ರಸ್ತೆಯಲ್ಲಿ ಬೈಕ್ನಲ್ಲಿ ಬರುತ್ತಿದ್ದ ಪೇದೆ ಹಿಂಬದಿಯಿಂದ ಲಾರಿಯೊಂದಕ್ಕೆ ಡಿಕ್ಕಿಹೊಡೆದಿದ್ದ ಪರಿಣಾಮ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here