ಕಲಬುರಗಿ: ಜಿಲ್ಲೆಯ ಪ್ರಭಾವಿ ನಾಯಕರಾದ ಸಂಸದ ಡಾ. ಉಮೇಶ್ ಜಾಧವ್ ಅವರ ಪುತ್ರ ಶಾಸಕರಾದ ಡಾ. ಅವಿನಾಶ್ ಜಾಧವ್ ಅವರಿಗೆ ಸಿಎಂ ಬಸವರಾಜ್ ಬೋಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಬೇಕೆಂದು ಚಿಂಚೋಳಿಯ ಬಿಜೆಪಿ ಹಿರಿಯ ಮುಖಂಡರಾದ ಕೆ.ಎಮ್ ಬಾರಿ ಮತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ನಾಮ ನಿರ್ದೇಶಿತ ನಿರ್ದೇಶಕರಾದ ಸದ್ದಾಮ್ ಹುಸೇನ್ ವಜೀರಗಾಂವ ಮನವಿ ಮಾಡಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂಸದ ಡಾ. ಉಮೇಶ್ ಜಾಧವ್ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮತ್ತು ಏಳಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಬಾರಿ ತಿಳಿಸಿದ್ದಾರೆ.
ಸಂಸದರಂತೆ ಶಾಸಕ ಅವಿನಾಶ್ ಜಾಧವ್ ಸಹ ಪ್ರತಿದಿನ ಜನರ ಸೇವೆಗೆ ಸಮಯ ಮಿಸಲಿಟ್ಟಿದ್ದು, ಅವರ ಈ ಕಾರ್ಯಾ ಪ್ರವೃತ್ತಿಗೆ ಚಿಂಚೋಳಿ ಮತ್ತು ಕಾಳಗಿ ಮತಕ್ಷೇತ್ರ ಸೇರಿ ಜಿಲ್ಲೆಯಲ್ಲಿ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂತಹ ಜನಪರ ನಾಯಕರನ್ನು ಸಿಎಂ ಬೋಮ್ಮಾಯಿ ಸಚಿವ ಸಂಪುಟದಲ್ಲಿ ಸೇರಿಸುವ ಮೂಲಕ ಕರ್ನಾಟಕ ಅಭಿವೃದ್ಧಿಗೆ ಬಲ ನೀಡಿ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಸದ್ದಾಮ್ ಹುಸೇನ್ ವಜೀರಗಾಂವ ಒತ್ತಾಯಿಸಿದ್ದಾರೆ.