ಕಲಬುರಗಿ: ನಗರದ ದರಿಯಾಪುರ ಲೇಔಟ್ ಬಳಿ ಇರುವ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಇತ್ತೀಚೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಶ್ ಶಶಿ ಅವರ ಅಧ್ಯಕ್ಷತೆಯಲ್ಲಿ “ಜಿಲ್ಲಾಮಟ್ಟದ ರೂಡ್ಸೆಟ್ ಸಲಹಾ ಸಮಿತಿ (ಡಿ.ಎಲ್.ಆರ್.ಎ.ಸಿ.) ಸಭೆ ನಡೆಯಿತು.
ಸಭೆಯಲ್ಲಿ ಸಂಸ್ಥೆಯ ಅಭಿವೃದ್ಧಿ ಹಾಗೂ ಸುಧಾರಣೆ ಬಗ್ಗೆ ಚರ್ಚಿಸಲಾಯಿತು.
ಸಂಸ್ಥೆಯ ನಿಯಮ ಮತ್ತು ಸಮಯಪಾಲನೆ ಶಿಸ್ತುಬೋಧನೆ ಕುರಿತು ಡಾ. ದಿಲೀಶ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇವೇಳೆ ಸ್ವಯಂ ಉದ್ಯೋಗಿಗಳನ್ನು ಅವರು ಪ್ರೇರೇಪಿಸಿದರು.
ಸಭೆಯಲ್ಲಿ ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕರಾದ ಮಾಣಿಕ್ ರಘೋಜಿ, ಲೀಡ್ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕರಾದ ಇಂತೇಸಾರ್ ಹುಸೇನ್, ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ರಮೇಶ ಭಟ್ಟ, ಎಸ್.ಬಿ.ಐ.ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ರವೀಶ್, ಎಸ್.ಬಿ.ಐ ಬ್ಯಾಂಕಿನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕರಾದ ಎ.ಪದ್ಮ ಕವಿತಾ ಹಾಗೂ ಅತಿಥಿ ಉಪನ್ಯಾಸಕ ಅರ್ಜುನ ರಂಗದಳ ಅವರು ಉಪಸ್ಥಿತರಿದ್ದರು.