ತಿಪ್ಪನಟಗಿ ಗ್ರಾಮದಲ್ಲಿ ಸ್ಮಶಾನ ಶಾಲಾ ಗ್ರಂಥಾಲಯ ನಿರ್ಮಾಣಕ್ಕೆ ಭೂಮಿ ನೀಡಲು ಒತ್ತಾಯ

0
130

ಸುರಪುರ: ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಸ್ಮಶಾನ ನಿರ್ಮಾಣಕ್ಕೆ ಮತ್ತು ಶಾಲೆ ಹಾಗು ನಿರ್ಮಾಣಕ್ಕೆ ಗೈರಾಣಿ ಭೂಮಿಯನ್ನು ಒದಗಿಸಿಕೊಡುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವವಹಿಸಿದ್ದ ಸಂಘಟನೆ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಮಾತನಾಡಿ,ಮಾಲಗತ್ತಿ ಸೀಮಾಂತರದಲ್ಲಿನ ಸರ್ವೇ ನಂಬರ್ ೨೧೧/೧ರಲ್ಲಿ ೫ ಎಕರೆ ೧೭ ಗುಂಟೆ ಗೈರಾಣ ಭೂಮಿಯಿದ್ದು,ಇದರಲ್ಲಿ ೧ ಎಕರೆಯಲ್ಲಿ ರುದ್ರಭೂಮಿ ನಿರ್ಮಾಣಕ್ಕೆ ಮತ್ತು ಇನ್ನುಳಿದ ೪ ಎಕರೆ ೧೭ ಗುಂಟೆ ಜಮೀನಿನಲ್ಲಿ ೪ ಎಕರೆಯಲ್ಲಿ ಶಾಲೆ ಹಾಗು ಆಸ್ಪತ್ರೆ ನಿರ್ಮಾಣಕ್ಕೆ ಹಾಗು ೧೭ ಗುಂಟೆ ಜಮೀನಿನಲ್ಲಿ ಗ್ರಾಮ ಪಂಚಾಯತಿ ಕಟ್ಟಡ ಮತ್ತು ಗ್ರಂಥಾಲಯ ನಿರ್ಮಾಣಕ್ಕೆ ಜಮೀನು ಒದಗಿಸಿಕೊಡಬೇಕು.

Contact Your\'s Advertisement; 9902492681

ಈಗಾಗಲೇ ಜಮೀನು ಒದಗಿಸಿಕೊಡಲು ಸ್ಥಳಿಯ ಗ್ರಾಮ ಪಂಚಾಯತಿ ಅಭೀವೃಧ್ಧಿ ಅಧಿಕಾರಿಗಳು ತಮಗೆ ಮನವಿ ಕೊಟ್ಟಿದ್ದಾರೆ.ಅಲ್ಲದೆ ಶಾಸಕರಾದ ಶರಣಬಸಪ್ಪಗೌಡ ದರ್ಶಾನಪುರ ಅವರು ಕೂಡ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಹಾಗು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ಮನವಿ ಸಲ್ಲಿಸಿದ್ದಾರೆ.ಆದರೂ ಇದುವರೆಗೆ ಜಮೀನು ಒದಗಿಸಿಲ್ಲ,ಇದರಿಂದ ಗ್ರಾಮದಲ್ಲಿನ ಅಭೀವೃಧ್ಧಿ ಕಾರ್ಯಗಳಿಗೆ ಹಿನ್ನಡೆಯುಂಟಾಗಿ ಜನರು ರಸ್ತೆಗಳಲ್ಲಿ ಶವ ಸಂಸ್ಕಾರ ಮಾಡುವಂತಾಗಿದೆ.ಆದ್ದರಿಂದ ಜಯಕರ್ನಾಟಕ ಸಂಘಟನೆ ತಮ್ಮಲ್ಲಿ ವಿನಂತಿಸುತ್ತಿದ್ದು ಕೂಡಲೇ ಸರ್ವೇ ನಂಬರ್ ೨೧೧/೧ ರ ಭೂಮಿಯನ್ನು ಸರ್ವೇ ಮಾಡಿ ಹದ್ದು ಬಸ್ತ್ ಮಾಡಿಸಿಕೊಡದಿದ್ದಲ್ಲಿ ಮುಂದೆ ನಡೆಯುವ ಉಗ್ರ ಹೋರಾಟಕ್ಕೆ ತಾವೇ ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ಎಚ್ಚರಿಸಿದ್ದಾರೆ.

ನಂತರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಶರಣಪ್ಪ ಬೈರಿಮರಡಿ,ತಾಲೂಕು ಕಾರ್ಯಾಧ್ಯಕ್ಷ ಮಲ್ಲು ನಾಯಕ ಕಬಾಡಗೇರ,ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಕಲ್ಲೋಡಿ,ಬಲಭೀಮನಾಯಕ ದೇವಾಪುರ,ಬಸವರಾಜ ಬಿಲಕಲ್,ಮೌನೇಶ ದಳಪತಿ,ರಫೀಕ್ ಷಾ,ಶಹನಾಜ್,ಭೀಮಣ್ಣ ತಿಪನಟಗಿ,ಯಂಕಣ್ಣ ಸುರಪುರ,ಮುದಿನಂದಪ್ಪ ತಿಪ್ಪನಟಗಿ,ಬಾಲದಂಡಪ್ಪ ತಿಪ್ಪನಟಗಿ,ಅಂಬು ಸುರಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here