ಸುರಪುರ : ಹಿರಿಯ ಸಾಹಿತಿ ಎ.ಕೃಷ್ಣಾ ಪ್ರಥಮ ಪುಣ್ಯ ಸ್ಮರಣೆ

0
12

ಸುರಪುರ: ನಗರದ ಖ್ಯಾತ ಹಿರಿಯ ಸಾಹಿತಿ ದಿ.ಎ.ಕೃಷ್ಣಾ ಅವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಎ.ಕೃಷ್ಣಾರವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ತ ಪುಷ್ಪ ನಮನ ಹಾಗೂ ಕಾವ್ಯ ಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಜೆ.ಅಗಸ್ಟಿನ್ ಮಾತನಾಡಿ, ಕನ್ನಡ ಸಾಹಿತ್ಯ ದೀಪವನ್ನು ಎಲ್ಲೆಡೆಗೆ ಹರಡಿಸುವ ಕೆಲಸವನ್ನು ಕೈಗೊಂಡರು, ಕವಿ ಎ.ಕೃಷ್ಣಾರವರು ನಾಡು ಕಂಡ ಅದ್ಭುತ ಹಾಗೂ ಪ್ರತಿಭಾನ್ವಿತ ಸಾಹಿತಿಗಳಲ್ಲಿ ಒಬ್ಬರಾಗಿದ್ದು ತಮ್ಮ ೧೨ನೇ ವಯಸ್ಸಿನಲ್ಲಿಯೇ ಶ್ರೀ ಚಂದ್ರಲಾಂಬ ಅಣು ಪುರಾಣವನ್ನು ರಚಿಸಿದರು,ರವೀಂದ್ರನಾಥ ಠಾಗೂರವರ ಗೀತಾಂಜಲಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಅವರ ಕೃತಿ ಅತ್ಯಂತ ಶ್ರೇಷ್ಠವಾಗಿದ್ದು ಅವರಿಂದ ರಚಿಸಲ್ಪಟ್ಟ ಅನೇಕ ಕವನ ಸಂಕಲನಗಳು ಹಾಗೂ ಅನೇಕ ಗ್ರಂಥಗಳ ಸಂಪಾದಕತ್ವವನ್ನು ಸಮರ್ಥವಾಗಿ ನಿರ್ವಹಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಅಮೂಲ್ಯವಾದದ್ದು ಎಂದು ಹೇಳಿದರು.

Contact Your\'s Advertisement; 9902492681

ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶ್ರೇಷ್ಠ ಕೊಡುಗೆ ನೀಡಿರುವ ಹಿರಿಯ ಸಾಹಿತಿ ಎ.ಕೃಷ್ಣಾ ಅವರು ಸಾಹಿತ್ಯ ಕ್ಷೇತ್ರದಲ್ಲಿ ಅವರೊಬ್ಬ ಪರಶುಮಣಿ ಆಗಿದ್ದರು ಪ್ರಶಸ್ತಿ,ಗೌರವಗಳ ಹಿಂದೆ ಬೀಳದೇ ತಮ್ಮ ಪಾಡಿಗೆ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವದರ ಜೊತೆಗೆ ಬೇರೆಯವರನ್ನು ಪ್ರೋತ್ಸಾಹಿಸಿ ಸಾಹಿತ್ಯ ಲೋಕಕ್ಕೆ ಅನೇಕ ಪ್ರತಿಭಾವಂತರನ್ನು ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ತಾಲೂಕು ಕ.ಸಾ.ಪ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದ ಹಿರಿಯ ಕವಿ ಎ.ಕೃಷ್ಣಾ ಅವರಲ್ಲಿದ್ದ ಪ್ರತಿಭೆ,ವಿದ್ವತ್,ಸಾಹಿತ್ಯ ಭಂಡಾರ ವಿಶ್ವವಿದ್ಯಾಲಯದಷ್ಟು ದೊಡ್ಡದಾಗಿತ್ತು, ಅವರು ತಮ್ಮ ಕವನಗಳಲ್ಲಿ ಬಳಸಿದ ಶಬ್ಧಗಳನ್ನು ವಿಶ್ವವಿದ್ಯಾಲಯದ ಪ್ರೋಫೆಸರ್‌ಗಳು ಕೂಡಾ ಬಿಡಿಸಿ ಹೇಳಲು ಆಗುತ್ತಿರಲಿಲ್ಲ ಎಂದು ಹೇಳಿದರು.

ಅವರೊಬ್ಬ ದೈವದತ್ತ ಕವಿಗಳಾಗಿದ್ದರು ಹೀಗಾಗಿ ತಮ್ಮ ಬಾಲ್ಯದಲ್ಲಿ ಘಟಿಸಿದ ಒಂದು ಘಟನೆಯನ್ನು ಸವಾಲನ್ನು ಸ್ವೀಕರಿಸಿದ ಅವರು ೬ನೇ ತರಗತಿಯ ಓದುತ್ತಿರುವಾಗಲೇ ಶ್ರೀ ಚಂದ್ರಲಾಂಬಾ ಅಣು ಪುರಾಣವನ್ನು ರಚಿಸುವ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದರು, ಅವರು ರಚಿಸಿದ ರವೀಂದ್ರನಾಥ ಠಾಗೂರರವರ ಗೀತಾಂಜಲಿ ಕನ್ನಡ ಅನುವಾದ ಕೃತಿ ಅನುವಾದಗೊಂಡ ಎಲ್ಲಾ ಕೃತಿಗಳಲ್ಲಿ ಅತ್ಯಂತ ಶ್ರೇಷ್ಠ ಎನ್ನಿಸಿಕೊಂಡಿದೆ, ತಮಗೆ ಬರಬೇಕಾದ ಪ್ರಶಸ್ತಿಗಳು,ಸ್ಥಾನಮಾನಗಳ ಕಡಗೆ ತಲೆಕೆಡಿಸಿಕೊಳ್ಳದೇ ಬೇರೆಯವರಿಗೆ ನೀಡುವಂತೆ ಹೇಳುವ ದೊಡ್ಡ ಗುಣ ಅವರಲ್ಲಿತ್ತು, ಯಾವುದೇ ಹಮ್ಮು ಬಿಮ್ಮುಗಳಿಲ್ಲದ ವ್ಯಕ್ತಿಯಾಗಿದ್ದ ಅವರು ಅನೇಕ ಹಿರಿಯ ಹಾಗೂ ಕಿರಿಯ ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು ಎಂದು ಹೇಳಿದರು.

ಸುರಪುರ ಪಂಚಾಂಗ ಕತೃಗಳಾದ ಕೇದಾರನಾಥ ಶಾಸ್ತ್ರಿ,ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಣ್ಣ ಬಿ.ಕೆ.ಆಲ್ದಾಳ,ಶ್ರೀಹರಿರಾವ ಆದವಾನಿ,ನಬೀಲಾಲ್ ಮಕಾನದಾರ ಇತರರು ಹಿರಿಯ ಕವಿ ಎ.ಕೃಷ್ಣಾರವರ ಸಾಹಿತ್ಯ ಸೇವೆ ಕುರಿತು ಮಾತನಾಡಿದರು, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಿದ್ದರು.

ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಶಿವಮೂರ್ತಿ ಟಣಕೆದಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು,ಈ ಸಂದರ್ಭದಲ್ಲಿ ಕವಿಗಳಾದ ಕುತಬುದ್ದಿನ್,ದೊಡ್ಡ ಮಲ್ಲಿಕಾರ್ಜುನ ಹುದ್ದಾರ,ಅನ್ವರ ಜಮಾದಾರ,ಶರಣಬಸವ ಯಾಳವಾರ,ವೆಂಕಟೇಶಗೌಡ ಪಾಟೀಲ,ಕನಕಪ್ಪ ವಾಗಣಗೇರಾ ಸೇರಿದಂತೆ ಉಪಸ್ಥಿತರಿದ್ದ ಅನೇಕ ಕವಿಗಳು ಕವನ ವಾಚಿಸಿದರು.

ಹಿರಿಯ ಗಾಯಕಿ ನಿರ್ಮಲಾ ರಾಜಗುರು,ವೇದಾವ್ಯಾಸಾಚಾರ್ಯ,ನ್ಯಾಯವಾದಿ ಜಯಲಲಿತಾ ಪಾಟೀಲ,ಶಿವಕುಮಾರ ಮಸ್ಕಿ,ರಾಜಶೇಖರ ದೇಸಾಯಿ,ಕೃಷ್ಣಮೂರ್ತಿ ಕುಲಕರ್ಣಿ,ರಾಘವೇಂದ್ರ ಭಕ್ರಿ,ರವಿ ಶಹಾಪುರಕರ, ಆನಂದ ಅರಳಿಗಿಡ ಹಾಗೂ ಇತರರು ಉಪಸ್ಥಿತರಿದ್ದದರು. ಎ.ಕಮಲಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು, ಹೆಚ್.ರಾಠೋಡ ನಿರೂಪಿಸಿದರು ದೊಡ್ಡ ಮಲ್ಲಿಕಾರ್ಜುನ ಹುದ್ದಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here