ನಾಲ್ಕು ವರ್ಷ ಪದವಿ ಪದ್ಧತಿ: ಉದ್ಯೋಗ, ಶಿಕ್ಷಣ ಕ್ಷೇತ್ರದಲ್ಲಿ ಅಸಮಾನತೆ ಸೃಷ್ಠಿಸಲಿದೆ: ರಾಜಶೇಖರ

0
46

ಶಹಾಬಾದ: ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಕರ್ನಾಟಕದಲ್ಲಿ ಜಾರಿಗೊಳಿಸಲು ಹೊರಟ ನಾಲ್ಕುವ?ದ ಪದವಿ ಪದ್ದತಿಯು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಅಸಾಮನತೆಯನ್ನು ಹೊಸ ಮಾದರಿಯ ತಾರತಮ್ಯವನ್ನು ಪುನ:ಸ್ಥಾಪಿಸಲಿದೆ ಎಂದು ಶಿಕ್ಷಣ ಉಳಿಸಿ ಸಮಿತಿಯ ರಾಜ್ಯ ನಾಯಕರಾದ ವಿ.ಎನ್.ರಾಜಶೇಖರ ಹೇಳಿದರು.

ಅವರು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ನಾಲ್ಕು ವ?ದ ಪದವಿ ಹೇರಿಕೆಯ ಕುರಿತು ಆನ್‌ಲೈನ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದರು. ನಾಲ್ಕುವ?ದ ಪದವಿ ಪದ್ದತಿಯು ವಿದೇಶಕ್ಕೆ ಹಾರಿಹೋಗುವ ಕೆಲವೆ ಕೆಲವು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆಯೇ ಹೊರತು ಬಹುದೊಡ್ಡ ಸಂಖ್ಯೆಯ ಬಡ ಮತ್ತು ಸಾಮಾನ್ಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಿಲ್ಲ. ಈ ನೀತಿಯಲ್ಲಿ ಬಹು ಹಂತದ ತೇರ್ಗಡೆಯಿರುವುದರಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣವಾದಜ್ಞಾನ ನೀಡಲಾರದು ಮತ್ತು ಉದ್ಯೋಗಕ್ಕೆ ಸಮರ್ಪಕ ಅಹ ಅಭ್ಯರ್ಥಿಗಳನ್ನೂ ಕೂಡಾ ಸೃಷ್ಟಿಸಲಾರದು. ಇದು ಅಸಾಮನತೆಯನ್ನು ಸೃಷ್ಟಿಸಿ ಹೊಸಮಾದರಿಯ ತಾರತಮ್ಯವನ್ನು ಸೃಷ್ಟಿಸಲಿದೆ ಎಂದರು.

Contact Your\'s Advertisement; 9902492681

ನಿವೃತ್ತ ಪ್ರಾಧ್ಯಾಪಕ ಹಾಗೂ ಚಿಂತಕರು ಕಾಶಿನಾಥ ಅಂಬಲಗಿ ಮಾತನಾಡುತ್ತಾ ಸರಕಾರ ಜನಾಭಿಪ್ರಾಯವನ್ನು ಕಡೆಗಣಿಸಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಗಾಳಿಗೆ ತೂರಿ ಮದಿಸಿದ ಆನೆಯಂತೆ ವರ್ತಿಸುತ್ತಾ ಈ ನೀತಿಯನ್ನು ಜಾರಿಗೊಳಿಸುತ್ತಿದೆ. ಇದು ಸಂವಿಧಾನ ವಿರೋಧಿ, ಜನ ವಿರೋಧಿ ಮತ್ತು ಸಮಾಜವಿರೋಧಿ ನೀತಿಯಾಗಿದೆ ಎಂದರು.

ಕಾಲೇಜು ಮತ್ತು ವಿಶ್ವವಿದ್ಯಾಲಯ ಉಪನ್ಯಾಸಕ ಸಂಘದ ಜಿಲ್ಲಾ ನಾಯಕಿ ಅಶ್ವಿನಿ.ಎಮ್ ಮಾತನಾಡುತ್ತಾ ಹೊಸ ಶಿಕ್ಷಣ ನೀತಿ -೨೦೨೦, ಬಹು ಶಿಸ್ತಿಯ ಪದ್ದತಿಯನ್ನು ಜಾರಿಗೊಳಿಸುತ್ತೇವೆ ಎಂಬ ಮುಖವಾಡದಲ್ಲಿ ಈಗಾಗಲೇ ಇರುವ ಅಂತರ್ ಸಂಬಂಧೀಯ ಬಹು ಶಿಸ್ತೀಯ ಪದ್ದತಿಯನ್ನು ಸರಕಾರಗಳು ಹಾಳುಮಾಡುತ್ತಿವೆಯಲ್ಲದೆ ಮಾನವೀಯ ಶಾಸ್ತ್ರಗಳನ್ನು ಅಪಾಯಕ್ಕೆ ತಳ್ಳುತ್ತಿವೆ ಎಂದರು.

ಕಲಬುರಗಿ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾಧ್ಯಕ್ಷ ಆರ್.ಕೆ.ವೀರಭದ್ರಪ್ಪ ಹಾಗೂ ಶಿಕ್ಷಣ ಉಳಿಸಿ ಸಮಿತಿಯ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪೂರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈಗಿರುವ ಸರಕಾರಿ ಶಿಕ್ಷಣ ಸಂಸ್ಥೆಗಳನ್ನು, ಮತ್ತು ಮೂಲಭೂತ ಅವಶ್ಯಕತೆಗಳನ್ನು ಪೂರೈಸದೆ ಹಠಾತ್ತನೆ ಇಂಥ ಬದಲಾವಣೆ ತರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಬರುವುದಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ತರಬೇಕಾದರೆ ಕನಿ? ಎರಡುವ? ಹಿಡಿಯುತ್ತದೆ ಮತ್ತು ಶಿಕ್ಷಣ ತಜ್ಞರ, ಪಾಲಕರ, ಉಪನ್ಯಾಸಕರ ಅಭಿಪ್ರಾಯ ಪಡೆದು ತರಬೇಕಾಗುತ್ತದೆ, ಆದರೆ ಇದೆಲ್ಲ ನಿರ್ಲಕ್ಷಿಸಿ ಇದೀಗ ಹಠಾತ್ತನೆ ಇಂಥ ಬದಲಾವಣೆ ಹೇರುವುದ ಶಿಕ್ಷಣ ಕ್ಷೇತ್ರಕ್ಕೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here