ಕಲಬುರಗಿ: ವಿಶ್ವಕರ್ಮ ಸಮಾಜದ ಸಂಘಟನೆ ಮಾಡಿ ರಾಜ್ಯದಲ್ಲಿ ಹಂಚಿ ಹರಿದು ಹೋದ ಸಮಾಜವನ್ನು ಒಂದು ಗೂಡಿಸಿದ ಶ್ರೇಯಸ್ಸು ವಿಧಾನ ಪರಿಷತ್ ಹಾಲಿ ಸದಸ್ಯ ಕೆ.ಪಿ. ನಂಜುಂಡಿಯವರಿಗೆ ಸಲ್ಲುತ್ತದೆ. ಆದರೆ ಸಮಾಜದಿಂದ ರಾಜಕೀಯವಾಗಿ ಮೇಲೆ ಬಂದ ಅವರು ಸಮಾಜದ ಒಳಿತಿಗಾಗಿ ಏನು ಮಾಡಿದರೂ ಎಂಬ ಪ್ರಶ್ನೆ ಮೂಡುವುದು ಸಹಜ, ಇನ್ನಾದರೂ ಸಮಾಜದ ಅಭಿವೃದ್ಧಿಗೆ ಶ್ರಮೀಸಲಿ ಎಂದು ವಿಶ್ವಕರ್ಮ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ದೇವೀಂದ್ರ (ಸುತಾರ) ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.
ವಿಶ್ವಕರ್ಮ ಸಮಾಜವನ್ನು ಒಗಟ್ಟು ಮಾಡುವುದರೊಂದಿಗೆ ಅನೇಕ ಸಭೆ ಸಮಾರಂಭಗಳನ್ನು ಮಾಡಿ ರಾಜ್ಯಾಧ್ಯಂತ ರಾಜಕೀಯವಾಗಿ ತಮ್ಮ ಹೆಸರು ಬೆಳೆಸಿಕೊಂಡರು. ಇದರಲ್ಲಿ ತಪ್ಪೇನಿಲ್ಲ ಆದರೆ ಒಗ್ಗಟ್ಟು ಮಂತ್ರ ಜಪಿಸುತ್ತಾ, ಸಮಾಜದಿಂದ ಮೇಲೆ ಬಂದು ಅದೇ ಸಮಾಜದ ಅಭಿವೃದ್ಧಿಗೆ ಮುಂದೆ ಬಾರದೇ ಇದ್ದರೆ ಹೇಗೆ? ಎನ್ನುವ ಪ್ರಶ್ನೆ ಈಗ ಎಲ್ಲರಲ್ಲಿ ಮೂಡದೆ.
ವಿಧಾನ ಪರಿಷತ್ತ ಸದಸ್ಯರಾಗಿ ನಾಮ ನಿರ್ದೇಶನಗೊಂಡ ನಂತರ ಸಮಾಜವನ್ನೇ ಕೆ.ಪಿ. ನಂಜುಂಡಿಯವರು ಮರೆತರೆ? ಎನ್ನುವದು ಪ್ರಶ್ನೆ ಸಮಾಜದ ಮುಖಂಡರ ಮುಂದೆ ಹರಿದಾಡುತ್ತಿದೆ.. ಎಂಎಲ್‌ಸಿ ಆಗುವ ಮುನ್ನ ಇದ್ದ ಮನಃಸ್ಥತಿ ಈಗ ಏಕೆ ಇಲ್ಲ? ರಾಜ್ಯದಲ್ಲಿ ೨೦೦೨ ರಿಂದ ರಾಜ್ಯದಲ್ಲಿ ಸರಿಸುಮಾರು ೨೮ ಜಿಲ್ಲಾ ಸಮಾವೇಶಗಳು, ವಿವಿಧ ಜಿಲ್ಲೆಗಳಲ್ಲಿ ೭ ರಾಜ್ಯ ಮಟ್ಟದ ಸಮಾವೇಶಗಳು ಮಾಡಿದ ಕೆ. ಪಿ. ನಂಜುಂಡಿಯವರಿಗೆ ಈಗ ಸಮಯವಕಾಶ ಇಲ್ಲವೇ? ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಸಮಾವೇಶಗಳಿಗೆ ಪ್ರತಿ ಜಿಲ್ಲೆಗಳಿಂದ ಸುಮಾರು ೧೦ ಸಾವಿರಕ್ಕೂ ಅಧಿಕ ಜನರು ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸುತ್ತಿದ್ದರು. ಪ್ರಯಾಣಕ್ಕಾಗಿಯೇ ಕೇವಲ ಒಂದು ಸಾವಿರ ರೂಪಾಯಿ ಖರ್ಚು ಹಿಡಿದರೂ ಸುಮಾರು ೨೪ ಕೋಟಿ ರೂಪಾಯಿ ಹಣ ಖರ್ಚು ಆಗಿರಬಹುದು ಅಂದರೆ ರಾಜ್ಯ ಮಟ್ಟದ ೭ ಸಮಾವೇಶಗಳಿಗೆ ಆದ ಖರ್ಚು ಕಡಿಮೆಯೇನು ಇಲ್ಲ.
ಸಮಾವೇಶಗಳಿಗೆ ರಾಜ್ಯದ ೬೭ ವಿವಿಧ ಮಠಾಧೀಶರು, ಮಠಾಧಿಪತಿಗಳು, ಧರ್ಮಗುರುಗಳು ಭಾಗವಹಿಸಿದ್ದರು. ಅವರ ಸಹಕಾರ ಆಶಿರ್ವಾದ ಪಡೆದುಕೊಂಡಿದ್ದು ಕೆ.ಪಿ. ನಂಜುಂಡಿಯವರು ಮರೆತರೇ?. ಪ್ರತಿ ಜಿಲ್ಲೆಯಲ್ಲಿ ಜಕಣಾಚಾರ‍್ಯರ ಪ್ರತಿಮೆ ಸ್ಥಾಪಿನೆಗೆ ಮುಂದಾಳತ್ವ ವಹಿಸುವದಾಗಿ ವಾಗ್ದಾನ ಮಾಡಿರುವದು ಮರೆತರೇ? ಎಂದು ದೇವೇಂದ್ರ ದೇಸಾಯಿ ಕಲ್ಲೂರ ಹಾಗೂ ಸಮಾಜದ ಹಿರಿಯ ಮುಖಂಡರ ಪ್ರಶ್ನೆಯಾಗಿದೆ.
ನಾಮನಿರ್ದೆಶಿತ ಎಂಎಲ್‌ಸಿ ಆದ ನನಗೆ ಸರಕಾರದ ವತಿಯಿಂದ ಯಾವುದೇ ಅನುದಾನ ಬರುವದಿಲ್ಲ ಎಂಬ ಉಡಾಪೆ ಉತ್ತರವನ್ನು ಸಮಾಜದ ಮುಖಂಡರುಗಳಿಗೆ ನೀಡಿರುವುದು ಕನಿಷ್ಠ ವ್ಯಕ್ತಿಗೂ ಅರ್ಥವಾಗುತ್ತದೆ. ಎಂಎಲ್‌ಸಿ ಆದವರಿಗೆ ಅನುದಾನವನ್ನು ಕೃಢಿಕರಿಸುವುದು ಹೇಗೆ ಎಂದು ತಿಳಿದಿರುತ್ತದೆ ಎನ್ನುದು ಕನಿಷ್ಠ ರಾಜಕೀಯ ಜ್ಞಾನ ಹೊಂದಿದ ವ್ಯಕ್ತಿಗೂ ತಿಳಿದಿದೆ. ನಾಮನಿರ್ದೇಶಿತ ಎಂ.ಎಲ್.ಸಿ. ಗೆ ಪ್ರತಿವರ್ಷ ೨ ಕೋಟಿ ರೂಪಾಯಿ ಅನುದಾವನ್ನು ಅವರ ಕಾರ್ಯಕ್ಷೇತ್ರದ ಅಭಿವೃದ್ಧಿಗೆ ಮೀಸಲಾಗಿರುತ್ತದೆ. ಅಲ್ಲದೇ ವಿವಿಧ ಅಭಿವೃದ್ಧಿಗಳ ಮಂಡಳಿಗಳಿಂದ ಅನುದಾನ ಕೂಡ ಪಡೆಯಬಹುದಾಗಿದೆ ಎನ್ನುವದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಇನ್ನಾದರೂ ಮಾನ್ಯ ವಿಧಾನ ಪರಿಷತ್ತ ಸದಸ್ಯರಾದ ಕೆ.ಪಿ. ನಂಜುಂಡಿಯವರು ಎಚ್ಚತ್ತುಕೊಂಡು ಸಮಾಜದ ಅಭಿವೃದ್ಧಿಗಾಗಿ ದುಡಿಯಲಿ, ಪ್ರತಿ ಜಿಲ್ಲೆಯಲ್ಲಿ ಅಮರ ಶಿಲ್ಪಿ ಜಕಣಾಚಾರ‍್ಯರ ಪ್ರತಿಮೆ ಸ್ಥಾಪನೆಗೆ ಮುಂದಾಗಲಿ. ಜಕಣಾಚಾರ‍್ಯರ ಜಯಂತಿಯನ್ನು ನಾನು ಒಬ್ಬನೆ ಮಾಡುತ್ತೇನೆ ಎಂಬ ಅಹಂನಿಂದ ಹೊರಬಂದು, ಮುಂದಿನ ದಿನಗಳಲ್ಲಿ ಸಮಾಜದ ಅಭಿವೃದ್ಧಿಗೆ ಮುಂದೆ ಬರಲಿ ಎಂದು ವಿಶ್ವಕರ್ಮ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ ಆಗ್ರಹಿಸಿದ್ದಾರೆ.