ಕಂಪ್ಲಿ: ಪ್ರವಾಸಿ ಮಂದಿರದಲ್ಲಿ ಕಂಪ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ವತಿಯಿಂದ ಇತ್ತಿಚ್ಚೆಗೆ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರಿ ವಕೀಲರಾಗಿ ನೇಮಕವಾದ ಕಂಪ್ಲಿಯ ಮೋಹನ್ ಕುಮಾರ್ ದಾನಪ್ಪನವರಿಗೆ ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ನಂತರ ಸನ್ಮಾನ ಸ್ವೀಕರಿಸಿದ ಮೋಹನ್ ಕುಮಾರ್ ದಾನಪ್ಪನವರು “ವ್ಯಕ್ತಿ ಯಾವುದೇ ಸಾಧನೆ ಮತ್ತು ಉನ್ನತ ಮಟ್ಟಕ್ಕೆ ತಲುಪಲು ಗುರಿಯ ಜೊತೆ ನಿರಂತರ ಅವಿರತ ಶ್ರಮ ಮುಖ್ಯವಾಗಿರಬೇಕು, ಸೋತಾಗ ನಿರಾಸೆಗೊಳ್ಳದೆ ಸೋಲು ಗೆಲುವಿನ ಮೆಟ್ಟಿಲಾಗಿ ಬದಲಾಗಿಸಿಕೊಳ್ಳಬೇಕೇ ಹೊರತು ನಿರಾಶಾದಾಯಕವಾಗಿ ಗುರಿಯನ್ನ ಅಂತ್ಯಗೊಳಿಸಬಾರದೆಂದು”ಯುವಕರಿಗೆ ಕರೆ ನೀಡಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಸದ್ರಿ ಅಸೋಸಿಯೇಷನ್ ನ ಗೌರವ ಅಧ್ಯಕ್ಷರಾದ ನಿವೃತ್ತ ಪೊಲೀಸ್ ಮುಖ್ಯ ಪೇದೆ ಶ್ರೀ ಬಳೆಗಾರ್ ಗೋಪಾಲ್ ರವರು ” ಕಂಪ್ಲಿ ಭಾಗದಿಂದ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಸಿಜಿಸಿ ಯಾಗಿ ನೇಮವಾಗಿರುವುದು ಹೆಮ್ಮೆಯ ವಿಷಯವಾಗಿದ್ದು ಯುವಕರು ತಮ್ಮಲ್ಲಿನ ಕೌಶಲ್ಯವನ್ನ ಸರಿಯಾದ ರೀತಿಯಲ್ಲಿ ಬಳಸಿಕೊಂಡು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಕೊಳ್ಳುವಲ್ಲಿ ಶ್ರಮಿಸಬೇಕೆಂದರು”.
ಈ ಸಂಧರ್ಭದಲ್ಲಿ ಸದ್ರಿ ಅಸೋಸಿಯೇಷನ್ ನ ಗೌರವ ಅಧ್ಯಕ್ಷರಾದ ಪೊಲೀಸ್ ಮುಖ್ಯ ಪೇದೆ ಶರಣಪ್ಪ, ಬೆಟ್ಟಪ್ಪ, ಹಿರಿಯ ಸಲಹೆಗಾರರಾದ ವಿ.ನಾರಾಯಣ ಸ್ವಾಮಿ, ಪಿ.ಸಿ.ಅಂಜಿನಪ್ಪ, ಅಧ್ಯಕ್ಷರಾದ ಎಂ. ಮಾರುತಿ, ಉಪಾಧ್ಯಕ್ಷರಾದ ಮಾನ್ವಿ ಮಹೇಶ್, ಪ್ರಧಾನ ಕಾರ್ಯದರ್ಶಿ ಸಿ.ರಾಮಪ್ಪ, ಸಂಘಟನಾ ಕಾರ್ಯದರ್ಶಿ ದುರುಗೇಶ್, ಜಂಟಿ ಕಾರ್ಯದರ್ಶಿ ಕೆ.ರಾಜಶೇಖರ್, ಖಜಾಂಚಿ ಟಿ.ಸುರೇಶ, ಹಿರಿಯ ಕುಸ್ತಿ ಪಟು ಹಾಗೂ ತರಬೇತುದಾರರಾದ ಉಸ್ತಾದ್ ಕೊಟ್ರಯ್ಯ ಸ್ವಾಮಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ. ರಾಮಪ್ಪ, ದಾದಾ ಖಲಂದರ್, ಗಾದಿಲಿಂಗ ಎಮ್ಮಿಗನೂರು, ಅಯೋಧೀ ಬಸವರಾಜ್, ಸಿ.ಕನಕಪ್ಪ, ತಿಮ್ಮಪ್ಪ ಪೂಜಾರಿ, ಗಣೇಶ್ ದೊಡ್ಡಮನೆ, ಮಾರುತಿ ಅಗಸರ, ರಾಮಪ್ಪ, ಸೈಯದ್ ವಾರೀಶ್, ಮನೋಜ್ ಕುಮಾರ್, ಡಿ. ಸಿದ್ದಿ ವಿರುಪಾಕ್ಷಿ, ಹೇಮಂತ್ ಕುಮಾರ್ ಡಿ, ಹಾಗೂ ಮುಂತಾದವರು ಪಾಲ್ಗೊಂಡಿದ್ದರು.