ಕಲಬುರಗಿ: ಸರ್ಕಾರದ ನಿರ್ದೇಶನದಂತೆ ಎಲ್ಲಾ ಪಡಿತರ ಚೀಟಿದಾರರು ತಮಗೆ ಸಂಬಂಧಪಟ್ಟ ಆಯಾ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ, ಬಯೋಮೆಟ್ರಿಕ್ ನೀಡಿ ಇ-ಕೆವೈಸಿ (ಜೀವ ಮಾಪಕ/ ಹೆಬ್ಬಟ್ಟು ಗುರುತಿನ ದೃಢೀಕರಣ) ಮಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ. ಆದ್ದರಿಂದ ಜಿಲ್ಲೆಯ ಇ-ಕೆವೈಸಿ ಮಾಡಿಕೊಳ್ಳದೇ ಇರುವ ಇನ್ನುಳಿದ ಪಡಿತರ ಚೀಟಿದಾರರು 2021ರ ಆಗಸ್ಟ್ ಮಾಹೆಯಲ್ಲಿ 2021ರ ಆಗಸ್ಟ್ 1 ರಿಂದ 10 ರವರೆಗೆ ಸಂಬಂಧಪಟ್ಟ ನ್ಯಾಯಬೆಲೆಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಕೊಳ್ಳಬೇಕೆಂದು ಕಲಬುರಗಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಶಾಂತಗೌಡ ಜಿ. ಗುಣಕಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 983 ನ್ಯಾಯಬೆಲೆ ಅಂಗಡಿಗಳಲ್ಲಿರುವ ಪಿಒಎಸ್ ವ್ಯವಸ್ಥೆಯ ಮೂಲಕ ಉಚಿತವಾಗಿ ಇ-ಕೆವೈಸಿ ಮಾಡುವ ಕಾರ್ಯವು ಪ್ರಗತಿಯಲ್ಲಿದ್ದು, ಈವರೆಗೆ ಜಿಲ್ಲೆಯಲ್ಲಿನ 63792 ಅಂತ್ಯೋದಯ ಅನ್ನ ಪಡಿತರ ಚೀಟಿಗಳಿಗೆ ಸಂಬಂದಿಸಿದಂತೆ 266037 ಸದಸ್ಯರ ಪೈಕಿ 27943 ಪಡಿತರ ಚೀಟಿಗಳ 109222 ಸದಸ್ಯರು, 487926 ಆಧ್ಯತಾ ಪಡಿತರ ಚೀಟಿಗಳ ಒಟ್ಟು 1653265 ಸದಸ್ಯರ ಪೈಕಿ 300379 ಪಡಿತರ ಚೀಟಿಗಳ 968047 ಸದಸ್ಯರು ಹಾಗೂ 101208 ಆದ್ಯತೇತರ ಪಡಿತರ ಚೀಟಿಗಳ 379955 ಸದಸ್ಯರ ಪೈಕಿ 33857 ಪಡಿತರ ಚೀಟಿಗಳ 98183 ಸದಸ್ಯರು ಇ-ಕೆವೈಸಿ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.