ವಿಶ್ವ ಸ್ನೇಹಿತರ ದಿನಾಚರಣೆ ನಿಮಿತ್ತ ಪಿಎಸ್ ಐ ಶಿವಕಾಂತ ಕಮಲಾಪುರಗೆ ಸನ್ಮಾನ

0
28

ಕಲಬುರಗಿ: ಶ್ರೀಮಂತರ ಗೆಳೆತನ ಮಾಡುವದಕ್ಕಿಂತ ತನ್ನ ಗೆಳೆಯರನ್ನೆ ಹೃದಯದಿಂದ ಶ್ರೀಮಂತರನ್ನಾಗಿ ಮಾಡುವದೆ ಗೆಳೆತನದ ಉದ್ದೇಶವಾಗಬೇಕೆ೦ದು ಈ ಭಾಗದ ಯುವ ಮುಖಂಡರಾದ ಸಮಾಜಸೇವಕ ದಸರಥ ಧುಮ್ಮನಸೂರ ಹೇಳಿದರು.

ಇ೦ದು ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘ ಹಾಗೂ ಕಲಬುರ್ಗಿ ಮಿತ್ರ ಮಂಡಳಿ ವತಿಯಿಂದ ನಗರದ ಶಾಂತಿನಗರದ ಹನುಮಾನ ದೇವಸ್ಥಾನದ ಆವರಣದಲ್ಲಿ ವಿಶ್ವ ಸ್ನೇಹಿತರ ದಿನಾಚರಣೆ ನಿಮಿತ್ತ ಪೊಲೀಸ ಇಲಾಖೆಯಲ್ಲಿ ಪಿಎಸ್ ಐ ಆಗಿ ಪದೋನ್ನತಿ ಹೊಂದಿದ ಶಿವಕಾಂತ ಕಮಲಾಪುರ ಅವರಿಗೆ ಗೌರವ ಸನ್ಮಾನಿಸಿದರು.

Contact Your\'s Advertisement; 9902492681

ಈ ವೇಳೆ ಮಾತನಾಡಿದ ಅವರು ಕಠಿಣ ಪರಿಶ್ರಮ ಹಾಗೂ ಸರಳ ಸಜ್ಜನಿಕೆಯಿಂದ ನಾವೆಲ್ಲರೂ ಸಮಾಜ ಸೇವೆ ಮಾಡುವುದರೊಂದಿಗೆ ನಮ್ಮ ರಾಷ್ಟ್ರಕ್ಕೆ ಕೊಡುಗೆಯಾಗಿ ನೀಡಬೇಕು, ನಮ್ಮ ನಮ್ಮ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರೆ ಅದು ದೇಶ ಸೇವೆಯಾಗುತ್ತದೆ  ಎಂದು ಹೇಳಿದರು.

ಪಿಎಸ್ ಐ ಶಿವಕಾಂತ ಕಮಲಾಪುರ ಗೌರವ ಸ್ವೀಕರಿಸಿ ಮಾತನಾಡುತ್ತಾ ನಾವೆಲ್ಲರೂ ಉತ್ತಮ ಗೆಳೆತನ ಹಾಗೂಒಳ್ಳೆಯ ಸಂಸ್ಕಾರವೆ  ನನ್ನ ಪದೋನ್ನತಿಗೆ ಕಾರಣವೆನ್ನುತ್ತಾ, ಗುರು ಹಿರಿಯರ ಹಾಗೂ ಗೆಳೆಯರ ಸಹಕಾರದ ಇನ್ನುಳಿದ ವರ್ಷಗಳಲ್ಲಿ ಪ್ರಾಮಾಣಿಕವಾಗಿ ಸೇವೆ  ಸಲ್ಲಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ ರಮೇಶ ಪಾಟೀಲ, ನಾರಾಯಣ ಕುಲಕರ್ಣಿ, ಪ್ರಭುಲಿಂಗ ಮಹಾಗಾಂವಕರ್, ಶಶಿಕಾಂತ ಪಸಾರ, ಶಿವಶರಣ  ಮಲಘಾಣ, ಚಂದ್ರಕಾಂತ ಕೌಲಗಿ,ವೀರಭದ್ರಯ್ಯಷಡಕ್ಷರಿ ಮಠ, ರಘುನಂದನ ಕುಲಕರ್ಣಿ,ಸಿದ್ರಾಮಪ್ಪ ಮಾಳಾ, ಶರಣು ಕಡಾಳೆ, ಬಸವರಾಜ ಕೋಣಿನ, ಮಲ್ಲಿಕಾರ್ಜುನ ಮಿಣಜಿಗಿ,  ಕಿರಣ ಕಮಲಾಪುರ,  ಗಿರೀಶ ಮರತುರಕರ, ಸಂಗಮೇಶ ಮಾಲಿಪಾಟೀಲ, ಪ್ರಶಾಂತ್ ಅಂಕಲಗಿ, ಕಿರಣ್ ಪಾಟೀಲ, ಇತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here