ಕಲಬುರಗಿ: ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧ್ಯಕ್ಷರಾದ ಅರುಣಕುಮಾರ ಎಸ್. ಪಾಟೀಲ ಅವರ ನೆತೃತ್ವದಲ್ಲಿ ನೂತನವಾಗಿ ಮಲ್ಲಿಕಾರ್ಜುನ ಮಾಲಿಪಾಟೀಲ ಭೂತಪೂರ ಅವರನ್ನು ಜಿಲ್ಲಾ ವೀರಶೈವ ಸಮಾಜದ ಸೆಡಂ ತಾಲೂಕಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೇಮಾಡಲಾಯಿತು ಎಂದು ಕಾರ್ಯಧ್ಯಕ್ಷ ಡಾ. ಶ್ರೀಶೈ ಘೂಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಲ್ಯಾಣಪ್ಪಾ ಪಾಟೀಲ ಮಳಖೇಡ ಉಪಾಧ್ಯಕ್ಷರು, ಚಂದ್ರಶೇಖರ ತಳ್ಳಳ್ಳಿ ಕೊಶಾಧ್ಯಕ್ಷರು, ಸಂಗನಗೌಡ ಪಾಟೀಲ , ವೀರೆಶ ಪಾಟೀಲ ಜಗತ್, ಶರಣು ಪಪ್ಪಾ, ಸಂಗಮೇಶ ಸ್ವಾಮಿ ಜೆವರ್ಗಿ, ಇನ್ನಿತರರು ಮಾತನಾಡಿದರು.
ಡಾ. ಶ್ರೀಶೈಲ ಘೂಳಿ ಕಾರ್ಯದರ್ಶಿಗಳು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು ಸಂಗನಗೌಡ ಸರಕನೂರ ವಂದಿಸಿದರು. ಸಭೆಯಲ್ಲಿ ಎಸ್.ವ್ಹಿ ಮಠಪತಿ ಸುಭಾಶ ಬಿಜಾಪೂರೆ, ಶ್ರೀದೇವಿ ಸಗಸನಗೇರಿ, ಸಾತಪ್ಪಾ ಪಟ್ಟಣಕರ್, ಶಿವಪುತ್ರಪ್ಪಾ ಡೆಂಕಿ, ಕಲ್ಯಾಣಪ್ಪಾ ಗೋದಿ, ಜಿ.ಡಿ. ಅಣಕಲ್, ಚಂದ್ರಶೇಖರ ಬಿಜಾಪೂರೆ, ಹಣಮಂತ ಪಾಟೀಲ ಜಗತ್ತ್, ಪರಮೇಶ್ವರ ಗುಡ್ಡಾ ಮುಂತಾದವರು ಉಪಸ್ಥಿತರಿದ್ದರು.