ಈಶ್ವರಪಗೆ ಡಿಸಿಎಂ, ಬಸವರಾಜ ಮತ್ತಿಮಡುಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹ

0
127

ಶಹಾಬಾದ: ನೂತನ ಸಚಿವ ಸಂಪುಟದಲ್ಲಿ ಕುರುಬ ಸಮುದಾಯದ ಸಚಿವರಾದ ಕೆ.ಎಸ್ ಈಶ್ವರಪ್ಪ ನವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಕುರುಬ ಸಮಾಜಕ್ಕೆ ಪ್ರಾಶಸ್ತ್ಯ ನೀಡಬೇಕು ಹಾಗೂ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರನ್ನು ಸಚಿವ ಸ್ಥಾನ ನೀಡಬೇಕಂದು ಕುರುಬ ಸಮಾಜದ ಹಾಗೂ ಬಿಜೆಪಿ ಮುಖಂಡರಾದ ಡಿ.ಸಿ.ಹೊಸಮನಿ, ಬಸವರಾಜ ಮದ್ರಿಕಿ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಎರಡು ವ?ಗಳಿಂದ ಆಡಳಿತ ನಡೆಸುತ್ತಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಿಎಂ ಬದಲಾವಣೆಯಿಂದಾಗಿ ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಇಳಿಸಿ ನೂತನವಾಗಿ ಬಸವರಾಜ ಬೊಮ್ಮಾಯಿ ಅವರು ನೂತನ ಮುಖ್ಯಮಂತ್ರಿಗಳಾಗಿ ಬುಧವಾರವ? ಅಧಿಕಾರ ಸ್ವೀಕರಿಸಿದ್ದಾರೆ.

Contact Your\'s Advertisement; 9902492681

ಆದರೆ ಸಿಎಂ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಕುರುಬ ಸಮುದಾಯಕ್ಕೂ ಪ್ರಾಶಸ್ಯ ನೀಡಬೇಕು. ರಾಜ್ಯದಲ್ಲಿ ಕುರುಬ ಸಮುದಾಯದವೂ ದೊಡ್ಡ ಸಮುದಾಯವಾಗಿದೆ. ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ ಅವರು ಸಹ ಮಾಜಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಬಿಜೆಪಿ ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸಿದ್ದಾರೆ.

ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ ಈಶ್ವರಪ್ಪನವರು ಪಕ್ಷವನ್ನು ಎಂದೂ ಬಿಟ್ಟಿಲ್ಲ. ಕೆಲವರು ಬೇರೆ ಪಕ್ಷ ಸೇರಿ ವಾಪಸ್ ಬಿಜೆಪಿಗೆ ಬಂದರೂ, ಈಶ್ವರಪ್ಪನವರು ಮಾತ್ರ ಮಾತೃ ಪಕ್ಷಕ್ಕೆ ಎಂದೂ ದ್ರೋಹ ಬಗೆದಿಲ್ಲ. ಪಕ್ಷವನ್ನು ನಂಬಿಕೊಂಡಿರುವುದರಿಂದ ಬೇರೆ ಪಕ್ಷದ ಕದ ತಟ್ಟದೆ ಸುಮಾರು ವ?ಗಳಿಂದ ಬಿಜೆಪಿ ಪಕ್ಷದಲ್ಲೇ ಉಳಿಯುವ ಮೂಲಕ ಪಕ್ಷ ನಿ?ಯನ್ನು ಮೆರೆದಿದ್ದಾರೆ. ಅಲ್ಲದೇ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಕ್ಷೇತ್ರದಲ್ಲಿ ಅಭಿವೃದ್ಧಿ ಪರವಾದ ಕೆಲಸಗಳನ್ನು ಮಾಡಿದ್ದಾರೆ.ಆದ್ದರಿಂದ ಯುವಕರಾದ ಬಸವರಾಜ ಮತ್ತಿಮಡು ಅವರನ್ನು ಈ ಬಾರಿ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here