ಸಂವಿಧಾನ ಉಳಿದರೆ ನಾವೆಲ್ಲ ಉಳಿಯುತ್ತೇವೆ: ಡಿ.ಜಿ.ಸಾಗರ

0
321

ಶಹಾಪುರ:ಬುದ್ದ ಬಸವ ಅಂಬೇಡ್ಕರ್ ಅವರ ಭಾವ ಚಿತ್ರ ಪೂಜಿಸಿದರೆ ಸಾಲದು ಅವರ ಆಶಯಗಳನ್ನು ಜಾರಿಗೆ ತರಲು ನಾವು ಕಟಿಬದ್ಧರಾಗಬೇಕು ಎಂದು ಡಿ.ಜಿ.ಸಾಗರ ನುಡಿದರು.

ನಗರದ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ ಜಯಾ ಲಾಡ್ಜನಲ್ಲಿ ಏರ್ಪಡಿಸಿದ್ದ ಸೋಲುತ್ತಿರುವ ಮೌಲ್ಯಾಧಾರಿತ ರಾಜಕಾರಣ ,ಬಲಗೊಳ್ಣಲುತ್ತಿರುವ ಕೇಸರಿಕರಣ ಎಂಬ ವಿಚಾರ ಸಂಕೀರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿರುವ ಜನರಿಗೆ ಮೀಸಲಾತಿ ಇದೆ. ಎಲ್ಲಿಯವರೆಗೆ ತಳ ಸಮೂಹಕ್ಕೆ ಸಾಮಾಜಿಕ ಮಾನ್ಯತೆ ಸಿಗುವುದಿಲ್ಲವೋ ಅಲ್ಲಿಯವರೆಗೆ ಮೀಸಲಾತಿ ಇದ್ದೇ ಇರುತ್ತದೆ. ಭಾರತೀಯ ಸಂವಿಧಾನ ಬಹುಸಂಖ್ಯಾತರ ಹಿತ ಮಾತ್ರ ಕಾಯಲಾರವು. ಅವು ಸರ್ವಜನರ ಹಿತ ಕಾಯುವಂಥವು. ಧರ್ಮ ಮತ್ತು ಜಾತಿ ಹೆಸರಿನ ಮೇಲೆ ಶೋಷಣೆ ನಿರಂತರವಾಗಿ ನಡೆದಿದೆ. ಸಮ ಸಮಾಜವನ್ನು ಕಟ್ಟುವ ಅವಕಾಶ ಸಂವಿಧಾನಕ್ಕೆ ಇದೆ. ಜಗತ್ತಿನಲ್ಲಿಯೇ ಅಗ್ರಗಣ್ಯವಾಗಿರುವ ಸಂವಿಧಾನಕ್ಕೆ ಕೈ ಹಚ್ಚುವ ಎತ್ತುಗಡೆಗೆ ಪ್ರಧಾನಿ ಮಾಡಬಾರದು ಎಂದು ವಿನಂತಿಸಿದರು.

ಈ ದೇಶ ಯಾರಪ್ಪನದೂ ಅಲ್ಲ. ಇದು ಎಲ್ಲರಿಗೂ ಸಂಬಂಧಿಸಿದ್ದು. ಒಂದೇ ರೀತಿ ಆಚರಣೆ, ನನ್ನ ಮಾತೇ ಸತ್ಯ ಉಳಿದವರದೆಲ್ಲ ಸುಳ್ಳು ಎಂಬುದನ್ನು ನಮ್ಮ ಸಂವಿಧಾನ ಒಪ್ಪುವುದಿಲ್ಲ. ದೇಶ ನಮ್ಮದು, ಸಂವಿಧಾನ ನಮ್ಮದು. ಯುವಕರು ಬದ್ಧತೆ ಬೆಳೆಸಿಕೊಳ್ಳಬೇಕು. ಬದ್ದತೆ ಇದ್ದರೆ ಮಾತ್ರ ನಾವು ಏನನ್ನಾದರೂ ಸಾಧಿಸಲು ಸಾಧ್ಯ. ಸಂಘ ಪರಿವಾರದ ಹುನ್ನಾರವನ್ನು ನಾವು ತಪ್ಪಿಸಬೇಕು ಎಂಬ ಕಿವಿ ಮಾತನ್ನು ಹೇಳಿದರು.

ಇದೆ ಸಂದರ್ಭದಲ್ಲಿ ಅತಿಥಿಯಾಗಿ ಮಾತನಾಡಿದ ಡಾ.ಭೀಮರಾಯ ಅಂಚೆಸೂಗೂರು, ರಾಜಕೀಯ ಇಂದು ಸಂಪೂರ್ಣ ಕೇಸರಿಕರಣಗೊಳ್ಳುತ್ತಿದೆ. ಇತಿಹಾಸ ತಿರುಚಲಾಗುತ್ತಿದೆ. ಮಕ್ಕಳನ್ನು ಪಠ್ಯ ಪುಸ್ತಕದ ಮೂಲಕ ಮತಾಂಧರನ್ನಾಗಿ ಮಾಡಲಾಗುತ್ತದೆ. ರಾಷ್ಟ್ರದ ತುಂಬೆಲ್ಲ ಅಲ್ಪಸಂಖ್ಯಾತ ಮತ್ತು ದಲಿತರ ಮೇಲೆ ದಾಳಿ ನಡೆದಿದೆ. ಇದು ತುಂಬಾ ಗಂಡಾಂತರದ ಸಂದರ್ಭ ಎಂದು ಎಚ್ಚರಿಸಿದರು. ಕೇವಲ ಒಂದು ಪಕ್ಷ ನಮ್ಮನ್ನು ಕೇಸರಿಕರಣಗೊಳಿಸುತ್ತಿಲ್ಲ. ಬಹುತೇಕ ಎಲ್ಲಾ ಪಕ್ಷಗಳು ಇದೆ ಹಿತಾಸಕ್ತಿಯನ್ನು ಹೊಂದಿವೆ. ನಮ್ಮಲ್ಲಿ ಈಗಾಗಲೇ ಬಿತ್ತಿರುವ ಹುಸಿ ಧಾರ್ಮಿಕ ಪ್ರಜ್ಞೆ ನಮ್ಮನ್ನು ಅದೇ ದಾರಿಗೆ ಕರೆದುಕೊಂಡು ಹೋಗುತ್ತಿದೆ. ಬುದ್ದ ಬಸವ ಅಂಬೇಡ್ಕರ್ ಅವರ ತತ್ವ ಹೇಳಿದರೆ ಸಾಲದು, ಅದನ್ನು ನಾವು ಬದುಕಬೇಕು ಎಂದು ಬಸವಮಾರ್ಗದ ವಿಶ್ವಾರಾಧ್ಯ ಸತ್ಯಂಪೇಟೆ ಅಭಿಪ್ರಾಯ ಪಟ್ಟರು.

ಇದೆ ಸಂದರ್ಭದಲ್ಲಿ ನೂತನವಾಗಿ ನಗರ ಸಭೆ ಸದಸ್ಯರಾಗಿ ಆಯ್ಕೆಯಾದ ಶಿವಕುಮಾರ ತಳವಾರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಅಮರೇಶಗೌಡ ದರ್ಶನಾಪುರ, ಡಾ.ರವಿಂದ್ರನಾಥ ಹೊಸ್ಮನಿ, ಮಹಾದೇವಪ್ಪ ಸಾಲಿಮನಿ, ಡಾ. ಬಸವರಾಜ ಇಜೇರಿ, ಸೈ.ಇಸಾಕ ಖಾಲಿದ್ ಉಪಸ್ಥಿತರಿದ್ದರು. ಪೂಜ್ಯ ಭಂತೆ ಮೆತೆಪಾಲ ಧರ್ಮಗಿರಿ ಶಹಾಪುರ ಸಾನಿಧ್ಯವಹಿಸಿದ್ದರು.

ಸಭೆಯಲ್ಲಿ ಈರಣ್ಣ ಸುರಪುರ, ಶಹಾಪುರ ಯಾದಗಿರಿಯ ದಲಿತ ಸಂಘರ್ಷ ಸದಸ್ಯರು ಪ್ರಗತಿಪರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here