ರಾಜೂಗೌಡಗೆ ತಪ್ಪಿದ ಸಚಿವ ಸ್ಥಾನ: ಬಿಜೆಪಿ ವಿರುದ್ಧ ಮುಖಂಡರ ಆಕ್ರೋಶ

0
26

ಸುರಪುರ: ರಾಜ್ಯ ರಾಜಕಾರಣದಲ್ಲಿ ತಮ್ಮದೆ ಆದ ಪ್ರಭಾವ ಹೊಂದಿರುವ ಹಾಗು ಮಾಜಿ ಸಚಿವರು ಮತ್ತು ಹಾಲಿ ಶಾಸಕರಾದ ನರಸಿಂಹ ನಾಯಕ (ರಾಜುಗೌಡ)ಗೆ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕ್ಷೇತ್ರದ ಅನೇಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರ ಸುರಪುರ ಮತ್ತು ಹುಣಸಗಿ ತಾಲೂಕಿನ ಸಾವಿರಕ್ಕೂ ಹೆಚ್ಚು ಜನ ಕಳೆದ ಎರಡು ದಿನಗಳಿಂದ ಬೆಂಗಳೂರಿಗೆ ತೆರಳಿ ಶಾಸಕ ರಾಜುಗೌಡ ಸಚಿವರಾಗಲಿದ್ದಾರೆ ಎನ್ನುವ ಹುಮ್ಮಸ್ಸಿನಲ್ಲಿ ಬೆಂಗಳೂರಲ್ಲಿ ಬೀಡು ಬಿಟ್ಟಿದ್ದ ರಾಜುಗೌಡ ಅವರ ಅಭಿಮಾನಿಗಳು ಹಾಗು ಬೆಂಬಲಿಗರು,ಬುಧವಾರ ಮುಂಜಾನೆ ಸಚಿವ ಸ್ಥಾನ ಲಭಿಸುತ್ತಿಲ್ಲ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ಕೆಂಡಾಮಂಡಲರಾಗಿದ್ದಾರೆ,ಅಲ್ಲದೆ ಬೆಂಗಳೂರಿನಲ್ಲಿಯೆ ಸಾವಿರಾರು ಜನರು ಪ್ರತಿಭಟನೆಯನ್ನು ನಡೆಸಿ ಬಿಜೆಪಿ ಕೇಂದ್ರ ಮುಖಂಡರ ಗಮನಸೆಳೆದರು.

Contact Your\'s Advertisement; 9902492681

ಅದರಂತೆ ಕ್ಷೇತ್ರದಲ್ಲಿಯೂ ಅನೇಕ ಮುಖಂಡರು ರಾಜುಗೌಡರಿಗೆ ಮೋಸ ಮಾಡಿದೆ ಎಂದು ಪಕ್ಷದ ವಿರುದ್ಧ ತೀವ್ರ ಅಸಮಧಾನ ಹೊರಹಾಕಿದ್ದಾರೆ.ಈ ಕುರಿತು ರೈತ ಹೋರಾಟಗಾರ ಹಾಗು ಶರಣ ಸೇವಾ ಸಂಸ್ಥೆಯ ಅಧ್ಯಕ್ಷ ಶಿವರಾಜ ಕಲಕೇರಿ ಮತ್ತು ರಾಜುಗೌಡ ಜನಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನರಡ್ಡಿ ಮಾತನಾಡಿ,ನಮ್ಮ ನಾಯಕರಾದ ರಾಜುಗೌಡ ಅವರಿಗೆ ಬಿಜೆಪಿ ಪಕ್ಷ ಮೋಸ ಮಾಡಿದೆ.

ಕೊನೆಯ ಕ್ಷಣದವರೆಗು ಸಚಿವರಾಗುವ ಭರವಸೆಯನ್ನು ನೀಡಿ ಕೊನೆ ಕ್ಷಣದಲ್ಲಿ ಹೆಸರನ್ನು ಕೈಬಿಡುವ ಮೂಲಕ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದೆ,ಇದು ಕೇವಲ ನಮ್ಮ ಕ್ಷೇತ್ರಕ್ಕೆ ಮಾತ್ರವಲ್ಲದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಿದೆ.ಯಾದಗಿರಿ,ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದ ಬಿಜೆಪಿ ನಡೆಗೆ ಧಿಕ್ಕಾರವೆಂದು ಮುಂಬರುವ ದಿನಗಳಲ್ಲಿ ಪಕ್ಷ ಇದರ ಪರಿಣಾಮ ಅನುಭವಿಸಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here