ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಸಂಸ್ಥೆಯಿಂದ ಸಿಎಸ್‌ಸಿ ಸೆಂಟರ್ ಆರಂಭ

0
14

ಸುರಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಆರಂಭಿಸಲಾಗಿದೆ.ಶುಕ್ರವಾರ ನಡೆದ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತ ಮುರಳಿಧರ ಅಂಬುರೆ ಮಾತನಾಡಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸಂಸ್ಥೆಯು ಸಮಾಜದ ವಿವಿಧ ರಂಗಗಳ ಏಳಿಗೆಗೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಿದ್ದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

ನಂತರ ಸಂಸ್ಥೆಯ ಯೋಜನಾಧಿಕಾರಿ ಸಂತೋಷ ಎ.ಎಸ್ ಮಾತನಾಡಿ,ಇಂದು ಅನೇಕ ಜನರಿಗೆ ಸರಕಾರದ ಯೋಜನೆಗಳ ಬಗ್ಗೆ ಗಮನಕ್ಕೆ ಇರುವುದಿಲ್ಲ ಇದರಿಂದ ಗ್ರಾಮೀಣ ಪ್ರದೇಶದ ಜನರು ಸರಕಾರದ ಯೋಜನೆಯ ಲಾಭ ಪಡೆಯದೆ ವಂತಿತರಾಗುತ್ತಾರೆ.ಆದ್ದರಿಂದ ಗ್ರಾಮೀಣ ಪ್ರದೇಶದ ಎಲ್ಲಾ ಜನರಿಗೂ ಸರಕಾರಗಳ ಯೋಜನೆಯನ್ನು ತಲುಪಿಸುವ ಕಾರ್ಯವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ವತಿಯಿಂದ ಮಾಡಬೇಕೆಂಬ ಮಹಾದಾಸೆಯನ್ನು ನಮ್ಮ ಪೂಜ್ಯರಾದ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆರಂಭಿಸಲಾಗುತ್ತಿದ್ದು,ತಾಲೂಕಿನ ಪ್ರತಿ ಸ್ವಸಹಾಯ ಗುಂಪು ಆಯಾ ಗ್ರಾಮಗಳ ಜನರಿಗೆ ಸರಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡಲಿದೆ ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕಚೇರಿ ಆಡಳಿತ ಪ್ರಬಂಧಕರಾದ ಶಿವಕುಮಾರ,ರಾಜೆಸಾಬ್,ರಮೇಶ ಕದಮ್,ಶಿವಕುಮಾರ ಅಂಬುರೆ,ಹನುಮಂತ ಟೊಣಪೆ ಹಾಗು ಕಚೇರಿ ಮೇಲ್ವಿಚಾರಕರು ಮತ್ತು ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸಿಎಸ್‌ಸಿ ಕೇಂದ್ರದ ಸೇವೆಯ ಕುರಿತಾದ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here