ಜೇವರ್ಗಿ: ತಾಲೂಕಿನ ಸಿರಥಳ್ಳಿ ಗ್ರಾಮದಲ್ಲಿ ಹತ್ತು ಹಲವಾರು ಸಮಸ್ಯೆಗಳಿದ್ದರೂ ಇಲ್ಲಿನ ಗ್ರಾಮ ಪಂಚಾಯತ್ ಅಭಿವೃದ್ಧಿಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ದಿವ್ಯ ನಿರ್ಲಕ್ಷ ವಹಿಸಿದ್ದಾರೆ.
ಇದರಿಂದಾಗಿ ಗ್ರಾಮಕ್ಕೆ ಸಂಚರಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು , ರಸ್ತೆಯ ಇಕ್ಕೆಲಗಳಲ್ಲಿ ಕುಡಿಯುವ ನೀರಿನ ಪೈಪು ಒಡೆದುಹೋದ ಪರಿಣಾಮ ರಸ್ತೆ ಸಂಚಾರಕ್ಕೆ ಬಾರದಂತಾಗಿದೆ. ಸಂಪೂರ್ಣ ಕಸ-ಕಡ್ಡಿ ತುಂಬಿಕೊಂಡಿರುವ ರಸ್ತೆ ಮೇಲೆ ಸಾರ್ವಜನಿಕರು ಸಂಚಾರ ಮಾಡುವುದು ನರಕಯಾತನೆ ಅನುಭವಿಸುವಂತೆ ಆಗುತ್ತಿದೆ. ಸದ್ಯಕ್ಕೆ ಮಳೆಗಾಲ ಆಗಮಿಸುತ್ತಿದ್ದು ರೋಗರುಜಿನಗಳಿಗೆ ಕಾರಣವಾಗಿದೆಯೆಂದು ಇಲ್ಲಿನ ಗ್ರಾಮದ ಜನರು ದೂರಿದ್ದಾರೆ .
ಈ ಕುರಿತಂತೆ ಒಂದು ತಿಂಗಳ ಹಿಂದೆ ಮನವಿ ಸಲ್ಲಿಸಿದರು ಯಾವ ಅಧಿಕಾರಿಗಳ ಈಕಡೆ ಸುಳಿದಿಲ್ಲ ಹಾಗೂ ಸಾರ್ವಜನಿಕರ ಸಮಸ್ಯೆಗೆ ಕಿವಿಗೊಡುತ್ತಿಲ್ಲ ಎಂದು ಸಿಗರಥಳ್ಳಿ ಗ್ರಾಮಸ್ಥರು ದೂರಿದ್ದಾರೆ.